ಶ್ರೀ ಕಾಳಿಕಾ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ‌್ಯಕ್ರಮಗಳು
Various religious programs at Sri Kalika Temple
ಲೋಕದರ್ಶನ ವರದಿ
ಬೆಳಗಾವಿ 08: ಶ್ರೀ ಕಾಳಿಕಾ ದೇವಸ್ಥಾನ, ಗಣೇಶಪೂರ ಗಲ್ಲಿ, ಶಹಾಪೂರ, ಬೆಳಗಾವಿಯಲ್ಲಿ ರವಿವಾರ, ದಿ. 07ರಂದು ವೇದಮೂರ್ತಿ ಬ್ರಹ್ಮರ್ಷಿ ರವೀಂದ್ರಾಚಾರ್ಯ ಹಾಗೂ ಬ್ರಹ್ಮವಾದೀನೀ ಕುಮಾರಿ ಭುವನೇಶ್ವರಿ ರವೀಂದ್ರಾಚಾರ್ಯ ಇವರ ಪೌರೋಹಿತ್ಯದಲ್ಲಿ ಕುಂಕುಮಾರ್ಚನೆ ಹಾಗೂ ಶ್ರೀ ಲಲಿತಾಸಹಸ್ರನಾಮ ಪಠಣ ಕಾರ್ಯಕ್ರಮವನ್ನು ಏರಿ್ಡಸಲಾಗಿತ್ತು.
ಈ ಕಾರ್ಯಕ್ರಮವನ್ನು ಶ್ರೀ ಕಾಳಿಕಾ ದೇವಸ್ಥಾನ ವಿಶ್ವಸ್ಥ ಮಹಿಳಾ ಮಂಡಳ ವತಿಯಿಂದ ಗೀತಾ ಸುತಾರ, ಪೂರ್ಣಿಮಾ ಪತ್ತಾರ, ರಾಜಶ್ರೀ ಬಡಿಗೇರ, ಕಮಲಾ ಕಟ್ಟಿ, ಶಾಂತಾ ಸುತಾರ, ಅರುಣಾ ಕಡಕೋಳ, ಜಯಶ್ರೀ ಕಮ್ಮಾರ, ಕವಿತಾ ಪತ್ತಾರ, ಅನ್ನಪೂರ್ಣ ಪತ್ತಾರ, ಮಂಜುಳಾ ಸಾಲಿ, ನಿರ್ಮಲಾ ಸುತಾರ, ಕವಿತಾ ಪೋತದಾರ, ಸುನಿತಾ ಪೋತದಾರ, ಪೂಜಾ ಶಿರಸಂಗಿ, ಇವರ ನೇತ್ರತ್ವದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ನೂರಾರು ಸುಮಂಗಲೆಯರು ಭಕ್ತಿಭಾವದಿಂದ ಪಾಲ್ಗೊಂಡು ಕುಂಕುಮಾರ್ಚನೆ ಹಾಗೂ ಶ್ರೀಲಲಿತಾಸಹಸ್ರನಾಮ ಪಠಿಸಿ ಶ್ರೀ ಕಾಳಿಕಾದೇವಿ ಕೃಪೆಗೆ ಪಾತ್ರರಾದರು. ನಂತರ ನೆರೆದಂತಹ ಎಲ್ಲ ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಜನಾರ್ಧನ ಬಡಿಗೇರ ಹಾಗೂ ಮಂಡಳದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 