ಕೋಟಿಕೋರನ ಬಾಯಲ್ಲಿ ಕೀಳು ಮಟ್ಟದ ಶಬ್ಧ ಬಳಕೆ ಶೋಭೆಯಲ್ಲ : ಸಿ.ಆರ್.ಹನುಮಂತ ತಿರುಗೇಟು
Use of low-level language by Kotikora is unbecoming: C.R. Hanumantha hits back
ಲೋಕದರ್ಶನ ವರದಿ
ಕಂಪ್ಲಿ 07: ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಿ ನಿಂತಿರುವ ಸ್ಥಳೀಯ ಶಾಸಕ ಜೆ.ಎನ್.ಗಣೇಶ ಅವರಿಗೆ ಪಾದಯಾತ್ರೆ ವೇಳೆ ಅವಾಚ್ಯ ಶಬ್ಧಗಳೊಂದಿಗೆ ಗಾಲಿ ಜನಾರ್ದನರೆಡ್ಡಿ ಕೀಳು ಮಟ್ಟದ ಭಾಷೆ ಬಳಕೆ ಮಾಡಿದ್ದು, ಈ ಪದಗಳು ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಆರ್.ಹನುಮಂತ ತಿರುಗೇಟು ನೀಡಿದರು.
ಪಟ್ಟಣದ ಸಂತೆ ಮಾರುಕಟ್ಟೆ ಬಳಿಯ ಅಂಬೇಡ್ಕರ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ಅವಾಚ್ಯ ಶಬ್ದ ಬಳಕೆ ಮಾಡುವುದಲ್ಲ. ಧಮ್ಮ, ತಾಕತ್ತು ಇದ್ದರೆ, ಕೂಡಲೇ ರಾಜಿನಾಮೆ ನೀಡಿ, ಪುನ: ಗೆದ್ದು ಬಂದರೆ ನಾನು ಅವರ ಮನೆಯ ಕಾವಲುಗಾರನಾಗಿ ಕೆಲಸ ಮಾಡುತ್ತೇನೆ. ಇಲ್ಲವಾದರೆ ನಿರ್ಧಾರ ನಿಮಗೆ ಬಿಟ್ಟಿದ್ದು ಎಂದು ಗುಡುಗಿದರು.
ಗಣಿ ಲೂಟಿ ಮಾಡಿ ಬಂದ ಜನಾರ್ದನರೆಡ್ಡಿ ಕಂಪ್ಲಿಯ ಬಹಿರಂಗ ಸಭೆಯಲ್ಲಿ ನಾಲಿಗೆ ಮೇಲೆ ಹಿಡಿತ ಇಲ್ಲದಂತೆ ಮಾತಾಡಿದ್ದಾರೆ. ಸ್ಥಳೀಯ ಶಾಸಕರ ಅಭಿವೃದ್ಧಿ ಕೆಲಸ ಸಹಿಸದೇ, ಅಭಿವೃದ್ಧಿ ರಸ್ತೆ ಮಾರ್ಗದಲ್ಲಿಯೇ ಗಂಗಾವತಿ ಪ್ರವೇಶಿಸುತ್ತಿದ್ದೀಯಾ. ಅದನ್ನು ಮೊದಲು ತಿಳಿದುಕೋ. ಮೊದಲು ನಿಮ್ಮ ಪತ್ನಿಯನ್ನು ಗೆಲ್ಲಿಸಿಕೊಂಡು ಬಾ. ಆ ಮೇಲೆ ಹತ್ತು ಕ್ಷೇತ್ರ ಗೆಲ್ಲಿಸುವೆ. ದೇಶದಲ್ಲಿ ನಿಮಗೆ ಲೂಟಿಕೋರನೆಂಬ ಬಿರುದಿದೆ.
ದೇಶಕ್ಕೆ ಕನ್ನ ಹಾಕಿ, ಜಡ್ಜ್ಗೆ ಡೀಲ್ ಮಾಡಿದ ಭೂಪ. ಬಳ್ಳಾರಿ ನಗರದಲ್ಲಿ ಗಲಾಟೆಯಾಗಲು ಮುಖ್ಯ ಕಾರಣ ನೀನು. ದಲಿತರು, ಹಿಂದುಳಿದವರು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲ. ಹಣದ ಪ್ರಭಾವದಲ್ಲಿ ನಡೆಯುತ್ತಿದ್ದೀಯಾ. ಆದರೆ, ಸ್ಥಳೀಯ ಶಾಸಕ ಗಣೇಶಗೆ ಅಭಿವೃದ್ಧಿ ಕೆಲಸದಲ್ಲಿ ನಡೆಯುತ್ತಿವೆ. ಇನ್ನೂ ಮುಂದೆ ಇಂತಹ ಕೀಳು ಶಬ್ಧ ಬಳಕೆ ಮಾಡಿದರೆ, ಕಂಪ್ಲಿ ಕ್ಷೇತ್ರದಿಂದ ಗಂಗಾವತಿಗೆ ಹೋಗಲು ಕಷ್ಟವಾಗುತ್ತದೆ. ನಾಲಿಗೆ ಹಿಡಿತದಲ್ಲಿ ಮಾತಾಡುವದನ್ನು ಮೊದಲು ಕಲಿ. ಮುಂದಿನ ದಿನದಲ್ಲಿ ನಿನಗೆ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 