ಕಾಗವಾಡ ವಿಧಾನಸಭೆ ಕ್ಷೇತ್ರದ ಎಸ್ಎಲ್ಆರ್ ವೀಕ್ಷಕರಾಗಿ ಉಮೇಶ್ ಪಾಟೀಲ ನೇಮಕ
ಲೋಕದರ್ಶನ ವರದಿ
ಕಾಗವಾಡ 2: ಕಾಗವಾಡ ವಿಧಾನಸಭೆ ಕ್ಷೇತ್ರದ ಎಸ್ಎಲ್ಆರ್ ವೀಕ್ಷಕರಾಗಿ ಕಾಗವಾಡ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಪಾಟೀಲ ಅವರನ್ನು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ನೇಮಕ ಮಾಡಿದ್ದಾರೆ. ಜುಗೂಳ ಗ್ರಾಮದ ನಿವಾಸಿಯಾಗಿರುವ ಉಮೇಶ್ ಪಾಟೀಲ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅವರ ಕಾರ್ಯವನ್ನು ಪರಿಗಣಿಸಿ ಕಳೆದ ವರ್ಷ ಕಾಗವಾಡ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಈಗ ಪಕ್ಷ ಸಂಘಟನೆಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಕಾಗವಾಡ ವಿಧಾನಸಭೆ ಕ್ಷೇತ್ರದ ಎಸ್ಎಲ್ಆರ್ ವೀಕ್ಷಕರ ಜವಾಬ್ದಾರಿಯನ್ನು ಪಕ್ಷವು ಅವರಿಗೆ ವಹಿಸಿದೆ.