ಮಲ್ಲಿಗೆ ನಾಡಿನ ಯು.ರಾಕೇಶ್ ಐಐಟಿಗೆ ಆಯ್ಕೆ
ಲೋಕದರ್ಶನ ವರದಿ
ಹೂವಿನಹಡಗಲಿ 17- ದೇಶದ ಕಷ್ಟದಪರೀಕ್ಷೆಗಳಲ್ಲಿ ಒಂದಾಗಿರುವ ಜೆಇಇ ಪಾಸ್ ಮಾಡುವುದು ಅನೇಕ ವಿದ್ಯಾರ್ಥಿಗಳ ಕನಸು. ಈ ಕನಸು ನನಸು ಮಾಡಿಕೊಳ್ಳಲು ಬೇಕಾಗಿರುವುದು ಪರಿಶ್ರಮವೊಂದೇ. ಇದೇ ರೀತಿ ಕಠಿಣ ಪರೀಕ್ಷೆಗೆ ತಯಾರಿ ನಡೆಸಿದ ಪಟ್ಟಣದ ಯು.ರಾಕೇಶ್ ಇದೀಗ ದೇಶದ ಟಾಪ್ ಐಐಟಿ ಸೇರಲು ಸಜ್ಜಾಗಿದ್ದಾರೆ. ಸಾಮಾನ್ಯ ಕುಟುಂಬದ ಯುವಕ, ಕಷ್ಟಗಳ ಹಾದಿಯಲ್ಲಿ ನಡೆಸಿರುವ ಈ ಯಶಸ್ಸಿಗೆ ಕುಟುಂಬವು ಸಂತಸ ವ್ಯಕ್ತಪಡಿಸಿದ್ದಾನೆ. ಪಟ್ಟಣದ ರಾಘವೇಂದ್ರ ಕಟ್ಟಿಗೆ ವ್ಯಾಪಾರಿ ಕಾರ್ಯ ನಿರ್ವಹಿಸುತ್ತರೆ. ಅವರು ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡಿದ್ದಾರೆ. ಉತ್ತಮ ಅಂಕಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಶಿಸ್ತುಬದ್ಧ ಮತ್ತು ಸಮಪರ್ಣಾಭಾವದ ಓದಿನ ಪರಿಣಾಮ ಮಾತ್ರ ನನ್ನ ಗೆಲುವಿಗೆ ಸಹಾಯಕವಾಗಿದೆ ಎನ್ನುತ್ತಾರೆ.
ತಾತ ಯು.ಹನುಮಂತಪ್ಪ, ತಂದೆ ರಾಘವೇಂದ್ರ ಅವರ ಪುತ್ರನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.ಮೊದಲಿನಿಂದಲೂ ಓದಿನಲ್ಲಿ ಚುರುಕಿದ್ದು . ಯು.ರಾಕೇಶ್ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದು ಜೆಇಇ ಪರೀಕ್ಷೆಗೆ ಸಿದ್ಧತೆ ನಡೆಸುವ ಮೂಲಕ ದೇಶಕ್ಕೆ ಉನ್ನತ ರ್‌ಯಾಂಕ್ ಪಡೆದಿದ್ದಾರೆ. ಪಟ್ಟಣದ ಖಾಸಗಿ ಶಾಲೆ ಹಾಗೂ ದಾವಣಗೆರೆಯ ಚೈತನ್ಯ ಟೆಕ್ ಪಿಯು ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಮಗನ ಈ ಸಾಧನಗೆ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ. ರಾಘವೇಂದ್ರ ಅವರ ಪುತ್ರ ಯು.ರಾಕೇಶ್ ಜೆಇಇ ಪ್ರವೇಶ ಪರೀಕ್ಷೆಯಲ್ಲಿ 1003ನೇ ರ್ಯಾಂಕ್ ಗಳಿಸುವ ಮೂಲಕ ಕಾಲ್ಪುರದ ಐಐಟಿ ಕೇಂದ್ರಕ್ಕೆ ಆಯ್ಕೆಯಾಗಿ ದ್ದಾರೆ.