ಗ್ರಾಮದ ಅಗ್ನಿವೀರಗೆ ಗೌರವ ಸನ್ಮಾನ

ಗ್ರಾಮದ ಅಗ್ನಿವೀರಗೆ ಗೌರವ ಸನ್ಮಾನ  Tribute to village fire hero

ಶಿಗ್ಗಾವಿ    20: ಇಂದಿನ ಯುವಕರು ಚಟಗಳಿಗೆ ದಾಸರಾಗದೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಬೇಕು ಎಂದು ರಾಜಶೇಖರಸ್ವಾಮಿ ಹಿರೇಮಠ ಹೇಳಿದರು. ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಇಬ್ಬರು ಅಗ್ನಿವೀರರಾಗಿ ಅಯ್ಕೆಯಾದ ಕೃಷ್ಣಪ್ಪ ಮಂಜುನಾಥ ನಡುವಿನಮನ್ಘಿ ಪ್ರಶಾಂತ ನಾಗಪ್ಪ ಶಿಗ್ಗಾವಿ ಅವರು ಮಹಾರಾಷ್ಟ್ರ ದ ನಾಸಿಕ ಆರ್ ಟಿ ತರಬೇತಿ ಕೇಂದ್ರದಲ್ಲಿ ತರಬೇತಿಗೆ ಹಾಜರಾಗಲು ಹೊರಡುತ್ತಿರುವ ಅಗ್ನಿವೀರರಿಗೆ ಗ್ರಾಮ ಒನ್ ನಾಗರಿಕ ಸೇವಾ ಕೆಂದ್ರ ಹಾಗೂ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. 

ಅಗ್ನಿವೀರರಿಗೆ ಸಿಹಿ ತಿನುಸುವ ಮೂಲಕ ಶುಭ ಕೋರಿ ಮಾತನಾಡಿದ ಅವರು ಇಬ್ಬರೂ ಯುವಕರು ದೇಶಸೇವೆ ಮಾಡಲು ಅಯ್ಕೆ ಆಗಿರುವುದು ನಮ್ಮ ಕ್ಯಾಲಕೊಂಡ ಗ್ರಾಮಕ್ಕೆ ಹೆಮ್ಮೆ ವಿಷಯ ಎಂದರು.  ಯುವ ಧುರೀಣ ಮನೋಹರ್ ಹಾದಿಮನಿ ಮಾತನಾಡಿ ಅಗ್ನಿವೀರರಾಗಿ ಆಯ್ಕೆಯಾಗಿರುವ ನಮ್ಮೂರಿನ ಯುವಕರಿಗೆ ಸ್ಪೂರ್ತಿ ಆಗುತ್ತಿದ್ದಾರೆ. ಮುಂದಿನ ಯುವಕರು ಸಹ ಇದೆ ರೀತಿ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಸಿಕೊಳ್ಳಬೇಕು ಎಂದರು. ನಾಗರಿಕ ಸೇವಾ ಕೆಂದ್ರದ ನಿರ್ವಾಹಕ ಮುತ್ತಪ್ಪ ಎಸ್ ಮಾತನಾಡಿ ಅಗ್ನಿವೀರರ ಶ್ರಮ ಸಾಕಷ್ಟಿದೆ.

ಜೊತೆಗೆ ಬಡತನದಲ್ಲಿ ಬೆಳೆದು ನಿರಂತರ ಪರಿಶ್ರಮದ ಪಲವಾಗಿ ದೇಶಸೇವೆಗೆ ಹೊರಡುತ್ತಿರುವುದು ಗ್ರಾಮಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.  ಈ ಸಂದರ್ಭದಲ್ಲಿ ಜಾಪರ ಬಾಗವಾನ,ಮಾಂತೇಶ ಮುಶಮ್ಮನವರ,ಮಂಜುನಾಥ ಹೊಸಮನಿ,ವೀರುಪಾಕ್ಷರೆಡ್ಡಿ ಅರಳಿಕಟ್ಟಿ,ಮನೋಜ ಹೂಗಾರ,ಬಾಬು ಗೊಣೆಪ್ಪನವರ,ರಿಯಾಜ ಮುಲ್ಲಾ ,ಕಾರ್ತಿಕ ಚಿನ್ನಣ್ಣವರ, ಖಲಂದರ ಅಂಚಿ,ಹರೀಶ ಕಳ್ಳಿಮನಿ,ಹಾಗೂ ಗ್ರಾಮದ ಗುರು ಹಿರಿಯರು ಹಾಗೂ ಯುವಕರು ಇದ್ದರು.