ಇಸ್ಲಾಂ ಸಮಾಜದಿಂದ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ

ಇಂಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ ವೃತ್ತದಲ್ಲಿ ಇಸ್ಲಾಂ ಸಮಾಜದ ವತಿಯಿಂದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಸಮಾಜದ ಮುಖಂಡರುಗಳಾದ ಇಲಿಯಾಸ ಬೋರಾಮಣಿ, ಜಾವೀದ್ ಮೋಮಿನ್, ಅಯೂಬ ಬಾಗವಾನ ಮತ್ತಿತರರು ಮಾತನಾಡಿ, ಸಿದ್ದೇಶ್ವರ ಶ್ರೀಗಳು ಒಂದು ಜಾತಿ-ಧರ್ಮಕ್ಕೆ ಸೀಮಿತರಾಗಿರಲಿಲ್ಲ. ಅವರ ಪ್ರವಚನವನ್ನು ಇಡೀ ಮನುಕುಲವೇ ಆಲಿಸುತ್ತಿತ್ತು. ಅವರ ಪ್ರವಚನ ಆಲಿಸಲು ನಾವುಗಳು ಸಹ ಕಾತುರದಿಂದ ಕಾಯುತ್ತಿದ್ದೆವು. ಅಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡ ಈ ನಾಡಿಗೆ ತುಂಬಲಾರದ ನಷ್ಠವಾಗಿದೆ ಎಂದರು. 

ಶ್ರಧ್ಧಾಂಜಲಿ ಸಭೆಯಲ್ಲಿ ಮೈಬೂಬ ಅರಬ, ಮುಕ್ತಾರ ಟಾಂಗೆವಾಲೆ, ಜಬ್ಬರ ಅರಬ, ಹಸನ ಮುಜಾವರ, ಯಾಕೂಬ ನಾಟೀಕಾರ, ಮಹ್ಮದ್ ಗುಲಬರ್ಗಾ, ಖಲೀಲ ಇಂಡೀಕರ, ಹಮೀದ ಮುಲ್ಲಾ, ಸಲೀಂ ತೋಳನೂರ, ರಂಜಾನ್ ಇಂಡೀಕರ್, ಹುಸೇನ ಕೊಟ್ನಾಳ ಮತ್ತಿತರರು ಇದ್ದರು. 

ಸಾಲೋಟಗಿ ಸಿದ್ದೇಶ್ವರ ಆಶ್ರಮದಲ್ಲಿ ಶ್ರದ್ಧಾಂಜಲಿ. 

ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದ ಜ್ಞಾನಯೋಗಿ ಸಿದ್ದೇಶ್ವರ ಗುರುದೇವಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

 ಮಾತನಾಡಿದ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಕಿವುಡೆ 2002ರಲ್ಲಿ ಸಿದ್ದೇಸ್ವರ ಶ್ರೀಗಳು ಸಾಲೋಟಗಿ ಗ್ರಾಮಕ್ಕೆ ಪ್ರವಚನಕ್ಕೆಂದು ಬಂದಿದ್ದರು. ಆ ಸಂದರ್ಭದಲ್ಲಿಯೇ ಅವರ ಹೆಸರಿನಲ್ಲಿ ಸಾಲೋಟಗಿ ಗ್ರಾಮದಲ್ಲಿ ಆಶ್ರಮ ನಿರ್ಮಿಸಿ ದಾಸೋಹ ವ್ಯವಸ್ಥೆ ಕಲ್ಪಿಸಿದ್ದನ್ನು ಸ್ಮರಿಸಿದರು. 

ಗುರುಶಾಂತ ಪ್ರಧಾನಿ, ಭೀಮರಾಯ ಹೊಸೂರ, ರಾಮಗೊಂಡ ಮಂಗೊಂಡ, ಸೋಮನಾಥ ಶಿವೂರ, ಶಿವನಗೌಡ ಪಾಟೀಲ, ಭೀಮರಾಯ ಗಾಣಿಗೇರ ಮತ್ತಿತರರು ಇದ್ದರು.