ಬೈಲಹೊಂಗಲ

ಯರಗೊಪ್ಪ ಗ್ರಾಮದಲ್ಲಿ ಗಿಡ ನಾಟಿ ಮಾಡುವ ಕಾರ್ಯಕ್ರಮ

ಯರಗೊಪ್ಪ ಗ್ರಾಮದಲ್ಲಿ ಗಿಡ ನಾಟಿ ಮಾಡುವ ಕಾರ್ಯಕ್ರಮ

ಬೈಲಹೊಂಗಲ 20 : ತಾಲೂಕಿನ ಯರಗೊಪ್ಪ ಗ್ರಾಮದಲ್ಲಿ 2025-26ನೇ ಸಾಲಿನಲ್ಲಿ ಯರಗೊಪ್ಪ ಸರ್ಕಾರಿ ಕೆರೆಯ ಹೂಳೆತ್ತಲಾದ ಕೆರೆ ಅಂಗಳದಲ್ಲಿ ಗಿಡ ನಾಟಿ ಮಾಡುವ ಕಾರ್ಯಕ್ರಮವನ್ನು ಧರ್ಮಸ್ಥಳ ಯೋಜನೆಯಿಂದ ಹಮ್ಮಿಕೊಳ್ಳಲಾಯಿತು. ಧಾರವಾಡ ಪ್ರಾದೇಶಿಕ ನಿರ್ದೆಶಕರಾದ ದಯಾಶೀಲ ಅವರು ಉದ್ಘಾಟನೆ ಮಾಡಿ ಕೆರೆ ಸುತ್ತಲೂ ಗಿಡ ನಾಟಿ ಮಾಡಿ ಕಾಪಾಡಿ ಬೆಳೆಸಿ ಪರಿಸರವನ್ನು ಮುಂದಿನ ಪೀಳಿಗೆ ಅನುಕೂಲಕರವಾಗುತ್ತದೆ ಎಂದರು.   

ಬಸವರಾಜ ಹಲ್ಕಿ ಕೆರೆ ಸಮಿತಿ ಅಧ್ಯಕ್ಷರು  ಶಿವಾನಂದ ಎಕ್ಕುಂಡಿ, ಶಾಲಾ ಶಿಕ್ಷಕರು ಧರ್ಮಸ್ಥಳ ಯೋಜನೆಯಿಂದ ಅನೇಕ ಸಾಮಾಜಿಕ ಕಾರ್ಯಕ್ರಮಗಳಿದ್ದು ಅವರು ಮಾಡಿಕೊಟ್ಟಿರುವ ಈಕೆರೆಯನ್ನು ಸ್ವಚ್ಛತೆ ಕಾಪಾಡಿಕೊಂಡು ಗಿಡಗಳ ರಕ್ಷಣೆ ಪಾಲನೆ ಮಾಡೋಣ ಎಂದರು.  ಒಕ್ಕೂಟ ಅಧ್ಯಕ್ಷರು ಕೆರೆ ಸಮಿತಿ ಎಲ್ಲಾ ಸದಸ್ಯರು ರೈತ ಬಾಂಧವರು  ಯೋಜನಾಧಿಕಾರಿಗಳು ವಲಯದ ಮೇಲ್ವಿಚಾರಕರು  ಕೃಷಿ  ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಸಂಘದ ಸರ್ವ ಸದಸ್ಯರು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ