ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ಅತಿ ಅವಶ್ಯಕ ಸೌಲಭ್ಯವಾಗಿದೆ: ಎಮ್.ಪನೀಶಾಯಣ್ಣ
Toilets are an essential facility for girls in schools: M. Panishayanna
ಲೋಕದರ್ಶನ ವರದಿ
ಬೆಟಗೇರಿ 08: ಗ್ರಾಮೀಣ ವಲಯದ ರೈತರ ಮಕ್ಕಳಿಗೆ ಕೆನರಾ ಬ್ಯಾಂಕನಿಂದ ಶೈಕ್ಷಣಿಕವಾಗಿ ದೊರಕುವ ವಿವಿಧ ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ಅವಶ್ಯಕ ಸೌಲಭ್ಯವಾಗಿದೆ ಎಂದು ಚಿಕ್ಕೋಡಿ ಕೆನರಾ ಬ್ಯಾಂಕ್ ರಿಜನಲ್ ಆಫೀಸ್‌ನ ಎಜಿಎಮ್ ಎಮ್.ಪನೀಶಾಯಣ್ಣ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಸ್ಥಳೀಯ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ(ಸಿಎಸ್‌ಆರ್)ದಡಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಸುಮಾರು 2 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಸಿದ ನೂತನ ಶೌಚಾಲಯ ಕಟ್ಟಡ ಉದ್ಘಾಟನಾ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬೆಳಗಾವಿ ಜಿಲ್ಲೆಯಾದ್ಯಂತ ಸುಮಾರು 24 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಕೆನರಾ ಬ್ಯಾಂಕ್ ವತಿಯಿಂದ ನೀಡಲಾಗಿದೆ. ಕೆನರಾ ಬ್ಯಾಂಕಿನಿಂದ ಸಿಗುವ ವಿವಿಧ ಯೋಜನೆಗಳ ಸಹಾಯ ಸೌಲಭ್ಯಗಳ ಕುರಿತು ತಿಳಿಸಿದರು.
ಕರ್ನಾಟಕ ಹಸಿರು ಸೇನೆ ರೈತ ಸಂಘ ರಾಜ್ಯಾಧ್ಯಕ್ಷ ಗಣೇಶ ಇಳಿಗೇರ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಮನುಷ್ಯನಿಗೆ ಅಧಿಕಾರವಿದ್ದಲ್ಲಿ ಅರಿವು ಇರಬೇಕು. ಕೂಡುವ ಮನಸ್ಸು ಸಹ ಇರಬೇಕು. ಕೊಟ್ಟದ್ದು ಕಡೆತನಕ ಉಳಿಯುತ್ತದೆ. ಉಸಿರು ಹೊದರು ಹೆಸರು ಉಳಿಯಬೇಕು ಇಂತಹವುಗಳಿಗೆ ಕೆನರಾ ಬ್ಯಾಂಕ್ ರಿಜನಲ್ ಆಫೀಸ್‌ನ ಎಜಿಎಮ್ ಎಮ್.ಪನೀಶಾಯಣ್ಣ ಮಾದರಿಯಾಗಿದ್ದಾರೆ ಎಂದರು.
ಸ್ಥಳೀಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮಾತನಾಡಿದರು. ಸರಸ್ವತಿ ಭಾವಚಿತ್ರಕ್ಕೆ ಪೂಜೆ, ಪುಷ್ಾರೆ್ಪನ ಹಾಗೂ ಜ್ಯೋತಿ ಪ್ರಜ್ವಲನೆ ಕಾರ್ಯಕ್ರಮ ನಡೆಯಿತು. ಶಾಲೆಯ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಶಾಲೆಯ ಎಲ್ಲಾ 500 ಮಕ್ಕಳಿಗೆ ನೋಟಬುಕ್ಕ್ ಮತ್ತು ಪೆನ್ ಹಾಗೂ ಶಾಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು 7 ವಿದ್ಯಾರ್ಥಿಗಳಿಗೆ ಸುಮಾರು 24 ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ಈ ವೇಳೆ ವಿತರಿಸಿದರು.
ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಜಗದೀಶ ಜಾಧವ, ಲಕ್ಷ್ಮಣ ನೀಲಣ್ಣವರ, ಲಕ್ಷ್ಮಣ ಚಂದರಗಿ, ರಾಮಣ್ಣ ನೀಲಣ್ಣವರ, ಎಂ.ಬಿ.ನಾಯ್ಕರ, ರಾಜು ಪತ್ತಾರ, ಬಸವರಾಜ ಕೋಣಿ, ಎಂ.ಜಿ.ಮಾವಿನಗಿಡದ, ಬಸವರಾಜ ಪಣದಿ, ರಾಮಣ್ಣ ಮುಧೋಳ, ಶಾಲೆಯ ಪ್ರಧಾನ ಗುರುಗಳಾದ ವೈ.ಸಿ.ಶೀಗಿಹಳ್ಳಿ, ಎಸ್.ಬಿ.ಸನದಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಸಿದ್ದಾರೂಢ ವಡೇರ, ಗುಳಪ್ಪ ಪಣದಿ, ಮಲ್ಲಿಕಾರ್ಜುನ ನೀಲಣ್ಣವರ, ಮುತ್ತೆಪ್ಪ ಕುರುಬರ, ಬೀರ್ಪ ಬಾಣಸಿ, ಯಲ್ಲಪ್ಪ ಚಂದರಗಿ, ಉಭಯ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ, ಸ್ಥಳೀಯರು, ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 