ಲಕ್ಷ್ಮೇಶ್ವರದಲ್ಲಿ ಗುಡುಗು ಮಿಂಚು ಭಾರಿ ಗಾಳಿಯೊಂದಿಗೆ ಮಳೆ ಹಲವಡೆ ಅವಾಂತರ
Thunderstorms, lightning, heavy winds, rain cause disruption in many places in Lakshmeshwaram
ಲಕ್ಷ್ಮೇಶ್ವರ" 18 : ಪಟ್ಟಣದಲ್ಲಿ ಭಾನುವಾರ ಸಂಜೆ 5: ಗಂಟೆಗೆ ಗುಡುಗು ಮಿಂಚು ಬಾರಿ ಗಾಳಿಯೊಂದಿಗೆ ಮಳೆ ಪ್ರಾರಂಭವಾಯಿತು ಮಳೆ ಆರ್ಭಟಕ್ಕಿಂತ ಗುಡುಗು ಮಿಂಚು ಗಾಳಿಯ ಆರ್ಭಟವೇ ಜೋರಾಗಿತ್ತು ಗಾಳಿಯ ಆರ್ಭಟಕ್ಕೆ ಕೆಲವು ಕಡೆ ಕಟ್ಟಿದ್ದ ಬ್ಯಾನರುಗಳು ಕಿತ್ತುಕೊಂಡು ಹೋದರೆ ಪೋಸ್ಟ್ ಆಫೀಸ್ ಹತ್ತಿರ ಟೂಜೂರಿ ಕಪಾಟ ಮಾಡುವ ಗ್ಯಾರೇಜ್ ಗೆ ಹಾಕಿದ್ದ ಕೆಲ ತಗಡುಗಳು ಕಿತ್ತುಕೊಂಡು ಹೋದರೆ ಪಶು ಆಸ್ಪತ್ರೆಯ ಕಾಂಪೌಂಡ್ ಹತ್ತಿರ ನಿಂತಿದ್ದ ಕಾರಿಗೆ ಗಿಡದ ಟೊಗೆ ಒಂದು ಬಿದ್ದು ಕಾರಿಗೆ ಹಾನಿಯಾಗಿದೆಪಟ್ಟಣದ ಮೇನ್ ಬಜಾರ ರಸ್ತೆಯಲ್ಲಿ ಮಳೆಯ ನೀರಿನಿಂದ ರಸ್ತೆ ಎನ್ನುವುದು ಕೆರೆಯಂತೆ ಕಾಣುತ್ತಿದ್ದರೆ ಕೆಂಚಲಪುರ ಓಣಿಯ ಇರುವ ಹಳ್ಳದ ನೀರು ಭರ್ತಿಯಾಗಿ ತುಂಬಿ ಹರಿಯುತ್ತಿದ್ದರೆ ಕೆಲವಡೆ ಮಳೆ ಗಾಳಿ ಆರ್ಭಟಕ್ಕೆ ಮರಗಳು ನೆಲಕ್ಕೆ ಉರುಳಿವೆ ಹಾಗೂ ರಂಭಾಪುರಿ ನಗರದಲ್ಲಿ ಮಳೆಯ ನೀರು ರಸ್ತೆಯ ತುಂಬೆಲ್ಲ ಹರಿದು ನಿವಾಸಿಗಳಿಗೆ ತೊಂದರೆ ಅನುಭವಿಸಿದರು ಇನ್ನು ಹಲವು ಕಡೆ ಹಾನಿಯಾದ ಬಗ್ಗೆ ಕೇಳಿ ಬರುತ್ತಿದ್ದು ಮಳೆ ಗಾಳಿ ಆರ್ಭಟಕ್ಕೆ ಕರೆಂಟ್ ಸಹ ವ್ಯಥೆಯವಾಗಿದೆ ಬಿಸಿಲಿನ ತಾಪದಿಂದ ತತ್ತರಿಸಿದ ಜನತೆಗೆ ಸುರಿದ ಭಾರಿ ಗಾಳಿ ಮಳೆಗೆ ತಣ್ಣನೆ ವಾತಾವರಣ ನಿರ್ಮಾಣವಾದರೆ ರೈತರ ಜಮೀನುಗಳಿಗೆ ಫಲವತ್ತಾದ ಮಳೆ ಬಿದ್ದಿರುವುದರಿಂದ ಬಿತ್ತನೆ ಚಟುವಟಿಕೆಗೆ ಹರುಷ ತಂದಿದೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 