ಕೊಲ್ಹಾರ ಒಂದೇ ರಾತ್ರಿ 3 ಮೋಟಾರ್ ಪಂಪ್‌ಸೆಟ್ ಎಗರಿಸಿದ ಕಳ್ಳರು!
Thieves make off with 3 motor pumpsets in a single night in Kolhar!
ಕೊಲ್ಹಾರ: ತಾಲೂಕಿನ ಕೊಲ್ಹಾರ ಪಟ್ಟಣದ ಪೌಜಿ ದಾಬಾ (ಸೈನಿಕ ವೃತ )ಸಮೀಪದ ಜಮೀನುಗಳಲ್ಲಿ ಸ್ಥಾಪಿಸಲಾಗಿದ್ದ ರೈತರ ಮೂರು ವಿದ್ಯುತ್ ಮೋಟಾರ್ ಪಂಪ್‌ಸೆಟ್‌ಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 5ರ ಶನಿವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಗುರುಲಿಂಗಪ್ಪ ಸಂಗಪ್ಪ ಗಣಿಯವರ ಜಮೀನು ಹಾಗೂ ಅಶೋಕ ಸಂಗಪ್ಪ ಉದ್ದಾರ ಅವರ ಜಮೀನಿನಲ್ಲಿದ್ದ ತಲಾ 5 ಹೆಚ್‌ಪಿ ಸಾಮರ್ಥ್ಯದ ಪಂಪ್‌ಸೆಟ್‌ಗಳು ಮತ್ತು ಬಸವರಾಜ ಸಿದ್ದಪ್ಪ ಉದ್ದಾರ ಅವರ ಜಮೀನಿನಲ್ಲಿದ್ದ ಜಕ್ಕಪ್ಪ ಕೊಂತಿಕಲ್ಲ ಅವರ 10 ಹೆಚ್‌ಪಿ ಸಾಮರ್ಥ್ಯದ ಪಂಪ್‌ಸೆಟ್ ಮೋಟಾರ್ ಅನ್ನು ಕಳ್ಳರು ಬಿಚ್ಚಿಕೊಂಡು ಪರಾರಿಯಾಗಿದ್ದಾರೆ.
ರವಿವಾರ ಬೆಳಿಗ್ಗೆ ರೈತರು ವಾಡಿಕೆಯಂತೆ ಜಮೀನುಗಳಿಗೆ ತೆರಳಿ ನೋಡಿದಾಗ ಮೋಟಾರ್ ಪಂಪ್‌ಸೆಟ್‌ಗಳು ಕಳವಾಗಿರುವುದು ಗೊತ್ತಾಗಿದೆ. ತಕ್ಷಣವೇ ಜಮೀನಿನ ಮಾಲೀಕರು ಸ್ಥಳೀಯ ಕೊಲ್ಹಾರ ಪೊಲೀಸ್ ಠಾಣೆಗೆ ತೆರಳಿ ಪಿಎಸ್‌ಐ ಅಶೋಕ ನಾಯಕ ಅವರಿಗೆ ಘಟನೆಯ ಕುರಿತು ದೂರು ನೀಡಿ, ಸೂಕ್ತ ಮಾಹಿತಿ ನೀಡಿದ್ದಾರೆ.
ಒಂದೇ ದಿನ ಮೂರು ಜಮೀನುಗಳಲ್ಲಿ ಸಾಲು ಸಾಲಾಗಿ ಪಂಪ್‌ಸೆಟ್‌ಗಳು ಕಳವಾಗಿರುವುದು ಸುತ್ತಮುತ್ತಲ ಭಾಗದ ರೈತರಲ್ಲಿ ತೀವ್ರ ಆತಂಕ ಹಾಗೂ ಭೀತಿಯನ್ನು ಹುಟ್ಟುಹಾಕಿದೆ. ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಸಮಗ್ರ ತನಿಖೆ ನಡೆಸಬೇಕು. ಕಳ್ಳರನ್ನು ಶೀಘ್ರವೇ ಪತ್ತೆ ಹಚ್ಚಿ, ಕಳುವಾಗಿರುವ ಪಂಪ್‌ಸೆಟ್‌ಗಳನ್ನು ಮರಳಿ ಕೊಡಿಸಬೇಕು ಎಂದು ಸಂತ್ರಸ್ತ ರೈತರು ತೀವ್ರವಾಗಿ ಒತ್ತಾಯಿಸಿದ್ದಾರೆ
ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಪಂಪ್ ಸೆಟ್ ಮೋಟರ್ ಕಳ್ಳತನ ಹೆಚ್ಚಾಗಿದೆ ಕೊಲ್ಹಾರ ಪೋಲಿಸರು ಕಳ್ಳರನ್ನು ಪತ್ತೆ ಹಚ್ಚಿ ನಮಗೆ ನ್ಯಾಯ ಒದಗಿಸಬೇಕು - ಅಶೋಕ ಉದ್ದಾರ - ಕೊಲ್ಹಾರ ಪಟ್ಟಣದ ರೈತ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 