ಮಳೆಯೂ ಇಲ್ಲ, ನದಿಯಲ್ಲಿ ನೀರಿಲ್ಲ : ಜಲ ಸಾಹಸ ಕ್ರೀಡೆಗೆ ಬ್ರೇಕ್ : ಪ್ರವಾಸೋದ್ಯಮಕ್ಕೆ ಪೆಟ್ಟುನಾಗರಾಜ್ ಹರಪನಹಳ್ಳಿ
There is no rain, there is no water in the river: a break for water adventure sports: Pettunagaraj H
ಕಾರವಾರ, 01 : ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂ. 1 ರಿಂದ ಆಗಸ್ಟ್ 31ರವರೆಗೆ ಜಿಲ್ಲೆಯ ನದಿ, ನದಿ ಹಿನ್ನೀರು , ಹಾಗೂ ಸಮುದ್ರದಲ್ಲಿ ಜಲಸಾಹಸ ಕ್ರೀಡೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಹೊರಡಿಸಲಾದ ಈ ಆದೇಶವು ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾದ ಮುನ್ನೆಚ್ಚರಿಕಾ ಕ್ರಮವಾಗಿದೆ. ಆದರೆ ದಾಂಡೇಲಿ ಮತ್ತು ಜೋಯಿಡಾ ಭಾಗದ ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳು, ರೆಸಾರ್ಟ್ ಮಾಲೀಕರು, ಹೋಂ ಸ್ಟೇ ನಿರ್ವಾಹಕರು ಹಾಗೂ ಸಾವಿರಾರು ಕಾರ್ಮಿಕರು ಈ ಆದೇಶದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರ ವಾದದ ಪ್ರಕಾರ, ಕಾಳಿನದಿಯ ಪರಿಸ್ಥಿತಿ ಜಿಲ್ಲೆಯ ಕರಾವಳಿ ಭಾಗಗಳಾದ ಕಾರವಾರ, ಗೋಕರ್ಣ, ಹೊನ್ನಾವರ ಅಥವಾ ಮುರ್ಡೇಶ್ವರದಂತಹ ಪ್ರದೇಶಗಳಿಗಿಂತ ಭಿನ್ನವಾಗಿದೆ. ಕಾಳಿನದಿಯ ಮೇಲ್ಭಾಗದಲ್ಲಿರುವ ಸೂಪಾ ಜಲಾಶಯದಲ್ಲಿ ಮಳೆಗಾಲದ ಆರಂಭಿಕ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಲಾಗುತ್ತದೆ. ಇದರಿಂದ ದಾಂಡೇಲಿ ಭಾಗದಲ್ಲಿ ನದಿಯ ಹರಿವು ಸಾಮಾನ್ಯ ಮಟ್ಟದಲ್ಲಿಯೇ ಇರುತ್ತದೆ. ಪ್ರತಿವರ್ಷ ಜೂನ್ ಮೊದಲ ವಾರದಲ್ಲೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವುದು ಅಪರೂಪ. ಹೀಗಿರುವಾಗ ಮಳೆ ಪ್ರಾರಂಭವಾಗುವ ಮೊದಲೇ ಮೂರು ತಿಂಗಳ ಕಾಲ ಸಂಪೂರ್ಣ ನಿಷೇಧ ಹೇರಿರುವುದು ಸ್ಥಳೀಯ ಪರಿಸ್ಥಿತಿಯ ವಾಸ್ತವತೆಯನ್ನು ಕಡೆಗಣಿಸಿದಂತಾಗಿದೆ ಎಂಬುದು ಉದ್ಯಮಿಗಳ ಅಭಿಪ್ರಾಯ.
ದಾಂಡೇಲಿಯ ಪ್ರವಾಸೋದ್ಯಮವು ಪರಿಸರದ ಪ್ರವಾಸೋದ್ಯಮ, ಹಾರ್ನಬಿಲ್ ಪಕ್ಷಿ ವೀಕ್ಷಣೆ, ಪಣಸೋಲಿ ಆನೆ ಶಿಬಿರ, ಹುಲಿ, ಜಿಂಕೆ ವೀಕ್ಷಣೆ, ದಟ್ಟ ಕಾಡಿನಲ್ಲಿ ಟ್ರ್ಯಕಿಂಗ್ ಸೇರಿದಂತೆ ಮುಖ್ಯವಾಗಿ ರಿವರ್ ರಾಫ್ಟಿಂಗ್, ಕಾಯಾಕಿಂಗ್, ಬೋಟಿಂಗ್ ಹಾಗೂ ಇತರೆ ಜಲಸಾಹಸ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಜಲಕ್ರೀಡೆಗಳೇ ಇಲ್ಲಿನ ಪ್ರವಾಸೋದ್ಯಮದ ಜೀವನಾಡಿಯಾಗಿದ್ದು, ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ಮೂರು ತಿಂಗಳ ಸಂಪೂರ್ಣ ನಿಷೇಧದಿಂದ ರೆಸಾರ್ಟ್ಗಳು, ಹೋಂ ಸ್ಟೇಗಳು, ಪ್ರವಾಸಿ ಮಾರ್ಗದರ್ಶಕರು, ವಾಹನ ಚಾಲಕರು, ದೋಣಿ ನಿರ್ವಾಹಕರು ಹಾಗೂ ಸ್ಥಳೀಯ ವ್ಯಾಪಾರಿಗಳ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 