ಸ್ವಾತಂತ್ರ್ಯ ಹೋರಾಟದಲ್ಲಿ ಗದಗ್ ಪತ್ರಿಕೆಗಳ ಪಾತ್ರ ಸ್ಮರಣೀಯ ಡಾ. ರಾಜೇಂದ್ರ ಗಡಾದ
The role of Gadag newspapers in the freedom struggle is memorable: Dr. Rajendra Gadad
ಲೋಕದರ್ಶನ ವರದಿ
ಗದಗ, ಆ.6: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ಪತ್ರಿಕೆಗಳು ಜನರಲ್ಲಿ ರಾಷ್ಟ್ರೀಯ ಚೇತನ ಮೂಡಿಸುವುದರ ಜೊತೆಗೆ ಬ್ರಿಟಿಷರ ದಮನ ನೀತಿಯನ್ನು ಖಂಡಿಸಿ ಸ್ವಾತಂತ್ರ್ಯದ ಸಂದೇಶವನ್ನು ಮನೆಮನೆಗೆ ತಲುಪಿಸಿದ ಮಹತ್ವದ ಕಾರ್ಯವನ್ನು ನಿರ್ವಹಿಸಿವೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ, ಸಾಹಿತಿ ಹಾಗೂ ಸಂಶೋಧಕ ಡಾ. ರಾಜೇಂದ್ರ ಎಸ್. ಗಡಾದ ಹೇಳಿದರು.
ನಗರದ ಮುಳುಗುಂದ ನಾಕಾ ಬಳಿಯ ಶ್ರೀ ಅಡವೀಂದ್ರ ಸ್ವಾಮಿಮಠದಲ್ಲಿ ನಡೆದ 350ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ "ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗದಗ ಜಿಲ್ಲೆಯ ಪತ್ರಿಕೆಗಳ ಪಾತ್ರ" ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಸ್ವದೇಶಿ ಚಳವಳಿ, ರಾಷ್ಟ್ರೀಯ ಭಾವನೆ ಮತ್ತು ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಕನ್ನಡ ಪತ್ರಿಕೆಗಳು ಪ್ರಮುಖ ಮಾಧ್ಯಮವಾಗಿದ್ದವು ಎಂದು ತಿಳಿಸಿದರು.
ಬಾಲಗಂಗಾಧರ ತಿಲಕರ ಕೇಸರಿ, ಮಹಾತ್ಮ ಗಾಂಧೀಜಿಯ ಹರಿಜನ ಸೇರಿದಂತೆ ಹಲವು ಪತ್ರಿಕೆಗಳ ಪ್ರಭಾವದಿಂದ ಗದಗ ಜಿಲ್ಲೆಯಲ್ಲೂ ಅನೇಕ ಕನ್ನಡ ಪತ್ರಿಕೆಗಳು ಪ್ರಕಟವಾಗಿ ರಾಷ್ಟ್ರಸೇವೆಯಲ್ಲಿ ಮಹತ್ವದ ಕೊಡುಗೆ ನೀಡಿವೆ ಎಂದು ಹೇಳಿದರು.
1921ರಲ್ಲಿ ಪ್ರಕಟವಾದ ವಿಶ್ವಬಂಧು, 1930ರಲ್ಲಿ ಆರಂಭವಾದ ದೇಶಬಂಧು, 1947ರಲ್ಲಿ ಪ್ರಕಟವಾದ ಕಲ್ಕಿ ಸೇರಿದಂತೆ ಹಲವು ಪತ್ರಿಕೆಗಳು ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದವು. ಈ ಪತ್ರಿಕೆಗಳ ಬೆಳವಣಿಗೆಗೆ ಪಂ. ಲೋ. ಬಂಕಾಪುರ, ಎಂ. ಜೀವನ್, ಕೆ.ಎಲ್. ಅಣ್ಣಿಗೇರಿ, ಹೆಚ್.ಎಸ್. ಹೊಂಬಾಳ, ರಾಮಾಚಾರ್ಯ ಗಲಗಲಿ, ಪಂಡರಿನಾಥಾಚಾರ್ಯ ಗಲಗಲಿ, ಕೆ.ಎನ್. ಶಾಂತಗಿರಿ, ಡಾ. ಎನ್.ಎಚ್. ಗೋಡಬೋಲೆ, ಹ.ರಾ. ಕಿದಿಯೂರು, ವೇದಮೂರ್ತಿ ಇಟಗಿ, ಜಯರಾಮಾಚಾರ್ಯ ಮಳಗಿ ಸೇರಿದಂತೆ ಹಲವಾರು ಪತ್ರಕರ್ತರು ಮತ್ತು ಸಾಹಿತಿಗಳು ನೀಡಿದ ಕೊಡುಗೆ ಅಮೂಲ್ಯವಾಗಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ ಎಸ್. ಜಾನಕಿ ಅವರಿಗೆ ಸ್ವರ ನಮನ ಸಲ್ಲಿಸಲಾಯಿತು. ಯುವ ಗಾಯಕಿ ಅಶ್ವಿನಿ ಸೋಮನಗೌಡ ಅವರು ಎಸ್. ಜಾನಕಿ ಹಾಡಿದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ನಾರಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತೆ ಸುವರ್ಣ ಸದಾಶಿವಯ್ಯ ಮದರಿಮಠ ಅವರನ್ನು ಸನ್ಮಾನಿಸಲಾಯಿತು. ಕಾಶಿಯಾತ್ರೆ ಪೂರ್ಣಗೊಳಿಸಿ ಬಂದ ದಂಪತಿಗಳಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು. ಬಿ.ಎಂ. ಬಿಳೆಯಲಿ ಅವರು ಕಾಶಿಯಾತ್ರೆಯ ಅನುಭವಗಳನ್ನು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಹೇಶ್ವರ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಗದಗ ಜಿಲ್ಲೆಯ ಪತ್ರಿಕೆಗಳು ಹಾಗೂ ಮಠಗಳ ಕೊಡುಗೆ ಅಪೂರ್ವವಾಗಿದ್ದು, ಇಂತಹ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರು, ಎಸ್.ಎಸ್. ಪಾಟೀಲ, ಡಾ. ಜಿ.ಎಸ್. ಹಿರೇಮಠ, ಉಮಾಪತಿ ಆರ್. ಬೂಸನೂರಮಠ, ಸುಶೀಲಾ ಕೋಟಿ, ಸುವರ್ಣ ಹೊಸಂಗಡಿ, ಗೀತಾ ಹೂಗಾರ್, ಯೋಗ ಸಾಧಕ ಕಾಳಗಿ ಅಜ್ಜನವರು, ಬಿ.ಡಿ. ಕಿಲಬನವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ 