ಅಭಿವೃದ್ಧಿ ಕಾಣದ ಆನಂದಪೂರ ಗ್ರಾಮದ ರಸ್ತೆಗಳು
The roads of Anandapur village are underdeveloped
ಯಮಕನಮರಡಿ, 03 ಃ ಸಮೀಪದ ಹತ್ತರಗಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಆನಂದಪೂರ ಬಡಾವಣೆಯಲ್ಲಿ ಕೊಳಚೆ ನೀರಿನಿಂದ ತುಂಬಿ ತುಳುಕುವ ರಸ್ತೆಗಳು, ಕೊಳಚೆ ನೀರು ರಸ್ತೆಗಳ ಮೇಲೆ ಹರಿದು ಬಂದರೂ ಸಹಿತ ಇತ್ತ ಕಡೆಗೆ ಜನ ಪ್ರತಿನಿಧಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯತ ಪ್ರತಿ ಸದಸ್ಯರಿಗೆ ಸುಮಾರು 3 ಲಕ್ಷ ರೂಪಾಯಿಗಳ ಅಭಿವೃದ್ಧಿಗಾಗಿ ಅನುದಾನ ಹಂಚಲಾಗಿದೆ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಆನಂದ ಹೊಳೆನ್ನವರ ಪತ್ರಕರ್ತರಿಗೆ ಮಾಹಿತಿ ನೀಡಿದರು. ಆದರೆ ಸದರಿ ಹಣವು ಯಾವ ಅಭಿವೃದ್ಧಿ ವಿನಿಯೋಗವಾಗಿದೆ ಎಂಬುದು ತಿಳಿಯದಂತಾಗಿದೆ.
ಎಲ್ಲಿ ನೋಡಿದಲ್ಲಿ ರಸ್ತೆಗಳ ಮಧ್ಯೆ ಗುಂಡಿಗಳು ಆ ಗುಂಡಿಗಳಲ್ಲಿ ಕೊಳಚೆ ನೀರು ಅಲ್ಲದೇ ಗ್ರಾಮದ ಕೆಲವೊಂದು ವಾರ್ಡಗಳಲ್ಲಿ ಸರಿಯಾದ ಚರಂಡಿಗಳೇ ಇಲ್ಲ, ಹೀಗಾಗಿ ಸದರಿ ಗ್ರಾಮವು ಆನಂದಪೂರ ಎಂಬುವ ತನ್ನ ಅಸ್ತಿತ್ವವನ್ನು ಕಳೆದುಕೊಂಡಂತಾಗಿದೆ. ಅಲ್ಲದೇ ಸಮರ್ಕವಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಕೂಡ ಇರುವುದಿಲ್ಲ. ಅಲ್ಲದೇ ನೀರಿನ ಓವರ್ ಟ್ಯಾಂಕುಗಳಲ್ಲಿ ಗಲೀಜು ತುಂಬಿದ್ದು ಇರುತ್ತದೆ. ಸದರಿ ಆನಂದಪೂರ ಗ್ರಾಮದ ಕುಡಿಯುವ ನೀರಿನ ಜಲಜೀವನ ಮಿಶನ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಓವರ್ ಟ್ಯಾಂಕ್‌ಗಳಲ್ಲಿ ನೀರಿಲ್ಲದೇ ಖಾಲಿಯಾಗಿರುತ್ತವೆ.
ಸದರಿ ಆನಂದಪೂರ ಗ್ರಾಮಕ್ಕೆ ಕ್ಷೇತ್ರದ ಸಚಿವರಾದ ಶ್ರೀ ಸತೀಶ ಜಾರಕಿಹೊಳಿಯವರು ಸುಮಾರು ಮೂರು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು ಇರುತ್ತದೆ. ಆದರೆ ಇಲ್ಲಿ ಸಮರ್ಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಕೇವಲ ಹೆಸರಿಗಾಗಿ ಆನಂದಪೂರ ಎಂದು ಕರೆಯುತ್ತಾರೆ. ನಿಜವಾದ ಆನಂದಪೂರವನ್ನು ದೀಪದ ಬೆಳಕಿನಲ್ಲಿ ಕಾಣುವಂತಾಗಿದೆ. ಅಲ್ಲಿಯ ಜನಪ್ರತಿನಿಧಿಗಳನ್ನು ಅಭಿವೃದ್ಧಿ ಬಗ್ಗೆ ವಿಚಾರಿಸಿದಾಗ ಸಮರ್ಕವಾದ ಉತ್ತರ ಸಿಗುತ್ತಿಲ್ಲ. ಈ ಕುರಿತು ಅಲ್ಲಿಯ ಕೆಲ ಜನರು ಸಮಾಜಸೇವಕರು, ಗ್ರಾಮ ಪಂಚಾಯತಿಗೆ ವಿಚಾರಣೆಗಾಗಿ ಹೋದರೆ ಕೆಲ ಮುಖಂಡರು ಮಾಹಿತಿ ಕೇಳುವವರ ಬಾಯಿಯನ್ನು ಮುಚ್ಚುತ್ತಾರೆ.
ಗ್ರಾಮದಲ್ಲಿ ಸುಮಾರು 5 ರಿಂದ 6 ವರ್ಷಗಳ ಕಾಲ ಆಸ್ತಿ ದಾಖಲಾತಿಗಳಿಗಾಗಿ ಇ ಸ್ವತ್ತು ಮಾಡಲು ಅರ್ಜಿಗಳನ್ನು ಸಲ್ಲಿಸಿದ್ದು ಇಲ್ಲಿಯವರೆಗೆ ಸದರಿ ಅರ್ಜಿದಾರರಿಗೆ ಯಾವುದೇ ತರಹದ ದಾಖಲೆಗಳನ್ನು ಒದಗಿಸಿರುವುದಿಲ್ಲ. ಕಾರಣ ಜನರು ಅಲೆದಾಡಿ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ಈ ಕುರಿತು ಗ್ರಾಮಸ್ಥರು ಬೆಳಗಾವಿ ಜಿಲ್ಲಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಪತ್ರಕರ್ತರಿಗೆ ತಿಳಿಸಿದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 