ಹಾಲುಮತ ಸಮಾಜದ ಆಚರಣೆಗಳು ಹಾಲಿನಷ್ಠೇ ಶುದ್ಧ: ಸುನೀಲಗೌಡ ಪಾಟೀಲ

The rituals of the Halumatha society are as pure as milk: Sunil Gowda Patil

ಹಾಲುಮತ ಸಮಾಜದ ಆಚರಣೆಗಳು ಹಾಲಿನಷ್ಠೇ ಶುದ್ಧ: ಸುನೀಲಗೌಡ ಪಾಟೀಲ  

ವಿಜಯಪುರ 15: ಹಾಲುಮತ ಸಮಾಜ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಾಮರಸ್ಯವನ್ನು ಇಂದಿಗೂ ಉಳಿಸಿಕೊಂಡು ಬಂದಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಇಂದು ಗುರುವಾರ ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿಯಲ್ಲಿ ಬೀರಲಿಂಗೇಶ್ವರ ಮತ್ತು ಭೀಮರಾಯ ಮುತ್ಯಾ ಜಾತ್ರಾ ಮಹೋತ್ಸವ, ಹಿರಿಯ ಹಬ್ಬದ ಅಂಗವಾಗಿ ದ್ವಾರಬಾಗಿಲು ಗುದ್ದಲಿ ಪೂಜೆ, ಹೊಸ ಬೆಳ್ಳಿ ಪಲ್ಲಕ್ಕಿ ಸಮರೆ​‍್ಣ ಹಾಗೂ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.   ಹಾಲುಮತ ಸಮಾಜದ ಆಚರಣೆಗಳು ಹಾಲಿನಷ್ಠೇ ಶುದ್ಧವಾಗಿವೆ.  ನಾವು ಯಾವುದೇ ಒಂದು ಶುಭ ಕಾರ್ಯ ಮಾಡುವಾಗ ಮೊದಲು ಕಂಬಳಿ ಹಾಸಿ ಪೂಜೆ ಮಾಡುವುದು ಇದಕ್ಕೆ ಸಾಕ್ಷಿಯಾಗಿದೆ.  ನಾಡಿಗೆ ಬೀರಲಿಂಗೇಶ್ವರ, ಭೀಮರಾಯ, ಮುಮ್ಮೆಟ್ಟಿಗುಡ್ಡ, ಸೋಮನಿಂಗ, ಅಮೋಘಸಿದ್ಧ, ಮಲಕಾಜಿಸಿದ್ಧ ಸೇರಿದಂತೆ ನಾನಾ ಪವಾಡ ಪುರುಷರನ್ನು ನೀಡಿದ ಕೀರ್ತಿ ಬಸವನಾಡು ವಿಜಯಪುರ ಜಿಲ್ಲೆಗಿದೆ.  ಈ ಪವಾಡ ಮಹನೀಯರು ತಮ್ಮ ಪವಾಡಗಳ ಮೂಲಕ ಸಮಾಜವನ್ನು ಉದ್ಧಾರ ಮಾಡಿದ್ದಾರೆ ಎಂದು ಅವರು ಹೇಳಿದರು.  ಗ್ರಾಮಸ್ಥರ ದೈವಭಕ್ತಿ ಮತ್ತು ಆಮಂತ್ರಣವನ್ನು ಒಪ್ಪಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಚಿಕ್ಕರೂಗಿ ಗ್ರಾಮಕ್ಕೆ ಬಂದಿದ್ದು, ಸಮಾಜದ ಶ್ರೇಯೋಭಿವೃದ್ಧಿಗೆ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಈ ಮುಂಚೆ ಈ ಭಾಗದಲ್ಲಿ ಸಾಕಷ್ಟು ನೀರಾವರಿ ಮಾಡುವ ಮೂಲಕ ಜಿಲ್ಲೆಗೆ ಅಂಟಿದ್ದ ಬರಪೀಡಿತ ಹಣೆಪಟ್ಟಿಯನ್ನು ಅಳಿಸಿ ಹಾಕಿದ್ದಾರೆ. ಈಗ ಕೈಗಾರಿಕೆ ಸಚಿವರಾಗಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ತರುತ್ತಿದ್ದಾರೆ. ಯುವಕರಿಗೆ ಉದ್ಯೋಗ ಒದಗಿಸುತ್ತಿದ್ದಾರೆ. ಬಸವನಾಡನ್ನು ಸಮೃದ್ಧಿಯ ಬೀಡನ್ನಾಗಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.   ಸುಕ್ಷೇತ್ರ ಹುಲಜಂತಿ ಪೀಠಾಧಿಪತಿ ಮಾಳಿಂಗರಾಯ ಮಹಾರಾಯರು ಸಾನಿಧ್ಯ ವಹಿಸಿದ್ದರು. ಸಚಿವ ಭೈರತಿ ಸುರೇಶ, ಮಾಜಿ ಶಾಸಕರಾದ ಪ್ರೊ. ರಾಜು ಆಲಗೂರ, ಶರಣಪ್ಪ ಸುಣಗಾರ, ಖ್ಯಾತ ನೇತ್ರತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ, ಮುಂಖಡರಾದ ಸುರೇಶಗೌಡ ಬಿರಾದಾರ, ಆನಂದ ದೊಡಮನಿ, ಬಿ. ಡಿ. ಪಾಟೀಲ, ಬಸೀರಶೇಠ ಬೇಪಾರಿ, ಬಸವರಾಜ ಎನ್‌. ಕುಮಸಗಿ, ಜಿ. ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಗೌರಮ್ಮ ಮುತ್ತತ್ತಿ ಮುಂತಾದವರು ಉಪಸ್ಥಿತರಿದ್ದರು.