ಮುರಿನ ಕಟ್ಟೆಯ ಮೂಲ ಸ್ಥಳ ಯಥಾಸ್ಥಿತಿಯಲ್ಲಿದೆ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಮುರಿನ ಕಟ್ಟೆಯ ಮೂಲ ಸ್ಥಳ ಯಥಾಸ್ಥಿತಿಯಲ್ಲಿದೆ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ  The original location of the Murina Katta remains intact: Deputy Commissioner Lakshmipriya

ಕಾರವಾರ 25  : ಭಟ್ಕಳ ನಗರ ಮೂಲಕ ಹಾಯ್ದು ಹೋಗುವ ರಾ.ಹೆ.66 ರ ಪಕ್ಕದಲ್ಲಿ ಶಿರಸಿ ಮಾರಿಕಾಂಬೆ ದೇವಸ್ಥಾನಕ್ಕೆ ಹೋಗುವ ಹೊರೆಯನ್ನಿಡುವ ಸ್ಥಳವಾಗಿದೆ. ಅದನ್ನು ಸ್ಥಳೀಯವಾಗಿ ಮುರಿನಕಟ್ಟೆ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಹಾಗೂ ಮುರಿನ ಕಟ್ಟೆಯ ಮೂಲ ಸ್ಥಳ ಯಥಾಸ್ಥಿತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಸೋಮವಾರ ಹೇಳಿಕೆ ನೀಡಿದ್ದು, ಮುರಿನ ಕಟ್ಟೆಯು ದೇವಸ್ಥಾನದ ಕಟ್ಟಡವಲ್ಲ.

ಅದೊಂದು ಅಮ್ಮನವರ ಹೊರೆಯನ್ನಿಡುವ ಕಟ್ಟೆ ಯಾಗಿದೆ. ಮುರಿನ ಕಟ್ಟೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆ ಇಡಲಾಗುತ್ತಿರುವ ಮೂಲ ಸ್ಥಳವಾಗಿದೆ.ಅದು ಯಥಾಸ್ಥಿತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ. ಸದ್ರಿ ಸ್ಥಳ ರಾ.ಹೆ.66 ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ವಾಹನ ಸಂಚಾರಕ್ಕೆ, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದ ಹಾಗೆ ಮುರಿನಕಟ್ಟೆಯನ್ನು ರಾಷ್ಟಿಯ ಹೆದ್ದಾರಿ ಪ್ರಾಧಿಕಾರದಿಂದ ಆರ್‌ಒಡಬ್ಲು ವ್ಯಾಪ್ತಿಯಲ್ಲಿ ಲಭ್ಯ ಸರ್ಕಾರಿ ಜಮೀನಿನಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ನಿರ್ಮಿಸಿದೆ.

ಮೇ.24 ರಂದು ಕೆಂಪು ಕಲ್ಲಿನಿಂದ ಕಟ್ಟಿದ ಕಟ್ಟೆಯನ್ನು, ಯಾರೋ ಕಿಡಿಗೇಡಿಗಳು ಏಕಾ ಏಕಿಯಾಗಿ ನಾಶಪಡಿಸಿರುವುದು ಕಂಡು ಬಂದಿರುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ. ಹೊಸದಾಗಿ ಸ್ಥಳಾಂತರಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಮುರಿನ ಕಟ್ಟೆಯನ್ನು ನಾಶಪಡಿಸಿದವರ ಮೇಲೆ ಕಾನೂನಿನಂತೆ ಪ್ರಕರಣಗಳನ್ನು ದಾಖಲಿಸಿಲಾಗಿರುತ್ತದೆ. ಮುಂದುವರೆದು ನಗರ ವ್ಯಾಪ್ತಿಯ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿ.ಎನ್‌.ಎಸ್‌.ಎಸ್‌. ಕಾಯ್ದೆ ಕಾಲಂ 163 ರಂತೆ ಪ್ರತಿಬಂಧ ತಡೆಯಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.