ಪ್ರಯತ್ನ ಸಂಘಟನೆಯಿಂದ ನಿರ್ಗತಿಕರಿಗೆ ರಗ್ಗು-ಕಂಬಳಿ ವಿತರಣೆ
The organization distributes rugs and blankets to the needy.
ಬೆಳಗಾವಿ, 25 : ಬೆಳಗಾವಿಯ ಪ್ರಯತ್ನ ಸಂಘಟನೆಯ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಲಗುವ ನಿರ್ಗತಿಕರಿಗೆ ರಗ್ಗು ಹಾಗೂ ಕಂಬಳಿಗಳನ್ನು ವಿತರಣೆ ಮಾಡಲಾಯಿತು.ರಾತ್ರಿ ವೇಳೆ ನಗರದ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಚಳಿಯಲ್ಲಿ ನಡುಗುತ್ತ ಮಲಗಿದ್ದ ಸುಮಾರು 20 ನಿರ್ಗತಿಕರಿಗೆ ಕಂಬಳಿಗಳನ್ನು ವಿತರಿಸಲಾಯಿತು.
ವೃದ್ಧಾಶ್ರಮ, ಅನಾಥಾಶ್ರಮ, ಅಂಧ ಮಕ್ಕಳ ಶಾಲೆಗಳಿಗೆ ದೇಣಿಗೆ ಹಾಗೂ ಬಡ ಮಕ್ಕಳ ಶಾಲಾ ಶುಲ್ಕ ಭರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿರುವ ಪ್ರಯತ್ನ ಸಂಘಟನೆ ಈ ಬಾರಿ ನಿರ್ಗತಿಕರಿಗೆ ನೆರವಾಯಿತು. ಈ ಸಂಧರ್ಭ ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ, ಕಾರ್ಯಕರ್ತೆಯರಾದ ವೀಣಾ ಕುಲಕರ್ಣಿ, ಗೌರಿ ಸರ್ನೋಬತ್, ಶ್ವೇತಾ ಬಿಜಾಪುರೆ, ಪದ್ಮಾ ವೆರ್ಣೇಕರ್, ಸುನೀತಾ ಭಟ್, ವರದಾ ಭಟ್, ಆರತಿ ಭಟ್, ಅಜಯೇಶ್ವರಿ, ವೈಷ್ಣವಿ, ಸಾವನ್, ವೆಂಕಟೇಶ್ ಸರ್ನೋಬತ್, ನವೀನ್ ಭಟ್ , ಸುರೇಶ್ ಭಟ್ ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 