ಮುಂದಗೋಡ

ಚಿಗಳ್ಳಿ ಗ್ರಾಪಂ ನೂತನ ಅಧ್ಯಕ್ಷ ರಹೀಮಾಬಿ ನೂರ್ ಅಹಮ್ಮದ್ ಮುಕ್ತೇಸರ, ಉಪಾಧ್ಯಕ್ಷ ರತ್ನವ್ವ ತಡಸದ

ಚಿಗಳ್ಳಿ ಗ್ರಾಪಂ ನೂತನ ಅಧ್ಯಕ್ಷ  ರಹೀಮಾಬಿ ನೂರ್ ಅಹಮ್ಮದ್ ಮುಕ್ತೇಸರ, ಉಪಾಧ್ಯಕ್ಷ ರತ್ನವ್ವ ತಡಸದ

ಮುಂಡಗೋಡ  25: ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಹೀಮಾಬಿ ನೂರ್ ಅಹಮ್ಮದ್ ಮುಕ್ತೇಸರ್ ಹಾಗೂ ಉಪಾಧ್ಯಕ್ಷರಾಗಿ ರತ್ನವ್ವ ತಡಸದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೊಂದಿಗೆ ಭಾರೀ ಗುದುಮುರಿಗಿಗೆ ಬಿದ್ದಿದ್ದ ಅಧ್ಯಕ್ಷರು ಆಯ್ಕೆ ಪ್ರಕ್ರಿಯೆ ನಡೆದು, ಅನಾಯಾಸವಾಗಿ ಕಾಂಗ್ರೆಸ್ ಬೆಂಬಲಿತರಿಗೆ ಅಧ್ಯಕ್ಷೆ ರಾಗಿ ಆಯ್ಕೆಯಾಗಿದ್ದಾರೆ.ಕೆ.ಪಿ.ಸಿ.ಸಿ ಸದಸ್ಯರಾದ ವಿವೇಕ್ ಹೆಬ್ಬಾರ್ ಅವರು ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ  ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶಾಲು ಹೊದಿಸಿ ಸನ್ಮಾನಿಸಿ  ಶುಭ ಹಾರೈಸಿದರು.

ಈ ವೇಳೆಯಲ್ಲಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ನಿಕಟಪೂರ್ವ ಅಧ್ಯಕ್ಷರಾದ ಜ್ಞಾನೇಶ್ವರ ಗುಡಿಯಾಳ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರವಿಗೌಡ ಪಾಟೀಲ್, ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಆರ್‌.ಹಿರೇಮಠ, ಪ್ರಮುಖರಾದ ಎಮ್‌.ಪಿ.ಕುಸೂರ, ಗೋಪಾಲ ಪಾಟೀಲ್, ಗುಡ್ಡಪ್ಪ ಕಾತೂರ, ನಾಗಭೂಷಣ ಹಾವಣಗಿ, ವಿನಯ ಸಂಗೂರಮಠ,ಮೋಹನ ಲಾಡನವರ್ , ತಿರುಪತಿ ವಡ್ಡರ್ ಸೇರಿದಂತೆ ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು ಕಾರ್ಯಕರ್ತರು, ಹಾಗೂ ಉಪಸ್ಥಿತರಿದ್ದರು. 


ಸುದ್ದಿ ಓದಿ