ದಾವಣಗೆರೆ, ಜ 23 : ಕುರಿಗಾಹಿಯನ್ನು ಕೊಂದು ಚಿನ್ನಾಭರಣ, ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ರಿಯೋರ್ವನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ ದಂಡ ವಿಧಿಸಿದೆ.
ಹರಿಹರ ತಾಲ್ಲೂಕು ಭಾನುವಳ್ಳಿಯ ಹಾಲೇಶ್ (30) ಶಿಕ್ಷೆಗೊಳಗಾದ ಅಪರಾಧಿ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮುದ್ದೆಹಳ್ಳಿ ಗ್ರಾಮದ ಮುದ್ದಣ್ಣ ಎಂಬ ಕುರಿಗಾಹಿ 2015ರ ಜುಲೈ 7ರಂದು ತನ್ನ ಸಂಗಡಿಗರ ಜತೆಗೆ ಹರಿಹರ ತಾಲ್ಲೂಕಿನ ಲಕ್ಕಶೆಟ್ಟಿಹಳ್ಳಿಯ ಮಲ್ಲಿಕಾರ್ಜುನ ಅವರ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ.
ಮುದ್ದಣ್ಣ ಒಬ್ಬರೇ ಬಿಡಾರದ ಬಳಿ ಇದ್ದಾಗ ಹಾಲೇಶ್ ಎಂಬಾತ ಮುದ್ದಣ್ಣನ ಮೇಲೆ ಮಾರಕಾಸ್ತ್ರದಿಂದ ಕೊಲೆ ಮಾಡಿ ಉಂಗುರ, ಕೈಚೈನು, ಹಣ ದೋಚಿದ್ದ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆಂಗಬಾಲಯ್ಯ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 10 ಸಾವಿರ ರೂ.ಗಳನ್ನು ಮೃತರ ಮಗ ಎಂ. ಬಸೇಗೌಡ ಅವರಿಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.