ಗೀತಾ ಬಾಬುಸಿಂಗ್ ಅವರಿಗೆ ಪಿಎಚ್‌ಡಿ ಪದವಿ

Geeta Babusingh gets PhD degree

ವಿಜಯಪುರ 07:  ಗುಲ್ಬರ್ಗಾ  ವಿಶ್ವವಿದ್ಯಾನಿಲಯವು  ಗೀತಾ ಬಾಬುಸಿಂಗ್ ಅವರು ಸಲ್ಲಿಸಿದ “ಎ ಸ್ಟಡಿ ಆನ್ ರಿಸ್ಟೋರೇಷನ್ ಆಫ್ ಫಾಗಿ ಆಂಡ್ ಮೊಷನ್ ಬ್ಲರ​‍್ಡ‌ ಇಮೇಜಿಸ್ ಆಫ್ ರೋಡ್ ಸೀನ್ಸ್‌” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.  

ಗೀತಾ ಬಾಬುಸಿಂಗ್ ಅವರು ಗುಲಬರ್ಗಾ ವಿವಿಯ ವಿಜ್ಞಾನ ನಿಕಾಯದ ಅನ್ವಯಿಕ ಎಲೆಕ್ಟ್ರಾನಿಕ್ಸ್‌ ವಿಭಾಗದ ಡಾ.ಆರ್‌.ಎಲ್‌.ರಾಯಭಾಗಕರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಡಾ.ಗೀತಾ ಬಾಬುಸಿಂಗ್ ಅವರನ್ನು ಹಂಗಾಮಿ ಕುಲಪತಿ ಗೂರು ಶ್ರೀರಾಮುಲು, ಕುಲಸಚಿವ ರಮೇಶ ಲಂಡನಕರ್, ಮೌಲ್ಯಮಾಪನ  ಕುಲಸಚಿವ ಪ್ರೊ.ನಿಂಗಪ್ಪ  ಕಣ್ಣೂರು ಅವರು ಅಭಿನಂದಿಸಿದ್ದಾರೆ. ಡಾ.ಗೀತಾ ಬಾಬುಸಿಂಗ್ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಜಿ.ರಜಪೂತ ಅವರ ಪತ್ನಿ.