ರಸ್ತೆ ಅಕ್ಕ ಪಕ್ಕದಲ್ಲಿ ಕೈಬೀಸಿ ಕರೆಯುತ್ತಿರುವ ಮಾವಿನ ರಾಜ !

The mango king is waving by the roadside!

ರಸ್ತೆ ಅಕ್ಕ ಪಕ್ಕದಲ್ಲಿ ಕೈಬೀಸಿ ಕರೆಯುತ್ತಿರುವ ಮಾವಿನ ರಾಜ !  

ಮುಂಡಗೋಡು  15: ಶಿರಸಿಯ ಹೋಗುವ ಹೆದ್ದಾರಿಯ ಅಕ್ಕ ಪಕ್ಕದಲ್ಲೇ ಕುಳಿತು ಬುಟ್ಟಿಯಲ್ಲಿ ಮಾವುಗಳ ರಾಶಿ ರಾಶಿಗಳು ಹಣ್ಣುಗಳು ಇಟ್ಟಿಕೊಂಡು. ಪಾಳಾದ ಕಡೆ ಹಣ್ಣಿನ ರಾಜನಿಗಾಗಿ ಪಾಳೆ ಹಚ್ಚಿದ ಜನ ರಸ್ತೆ ಅಕ್ಕ ಪಕ್ಕದಲ್ಲಿ  ಕೈಬೀಸಿ ಕರೆಯುವ ಮಾವಿನ ಹಣ್ಣುಗಳು ಪ್ರಯಾಣಿಕರಿಗೆ ತೋರಿಸುತ್ತಾ ವ್ಯಾಪಾರಿಗಳು ಗಮನ ಸೆಳೆದರು. ತಾಲೂಕಿನ ಸಿಂಗನಳ್ಳಿ ಎಂಬ ಗ್ರಾಮದಿಂದ ಹಿಡಿದು ಪಾಳಾದ ಗಡಿವರೆಗೆ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಮಾವಿನ ಮಾರಾಟ ಕಂಡುಬರುತ್ತದೆ. ಶಾಲೆಗೆ ಹೋಗುವ ಮಕ್ಕಳೂ ಸಹ ಬೇಸಿಗೆ ರಜೆ ಆದ್ದರಿಂದ ಪಾಲಕರಿಗೆ ಮಾರಾಟದಲ್ಲಿ ಸಾಥ್ ನೀಡುತ್ತಾರೆ. ಎಪ್ರೀಲ್‌- ಮೇ ಬಂತೆಂದರೆ ಸಾಕು, ಚಿನ್ನದ ಬಣ್ಣಕ್ಕೆ ತಿರುಗುತ್ತದೆ. ರಸ್ತೆಯ ಮೇಲೆಲ್ಲಾ ಮಾವಿನ ಸುಗ್ಗಿ! ಆಪೂಸ್, ಸಿಂಧೂರ ದಂತಹ ಬಹು ಬೇಡಿಕೆಯ ಹಣ್ಣುಗಳು ಯಾವುದೇ ಮಧ್ಯವರ್ತಿಗಳ ಕೊಕ್ಕಿಲ್ಲದೇ ನೇರ ರೈತರಿಂದ ಜನರಿಗೆ ದೊರೆಯುತ್ತವೆ! ಕದಂಬ ಕಾಲದಿಂದಲೂ ಕೂಡ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಪಾಳಾ ಎಂಬ ಹಳ್ಳಿಯು ಮಾವು-ಹಲಸಿನ ವ್ಯಾಪಕ ಬೆಳೆಗಾರರ ಊರು, ಸುಮಾರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲ್ಪಡುವ ಈ ಊರಿನಲ್ಲಿ ಜನರು ಹಣ್ಣುಗಳನ್ನು ನೇರ ರಸ್ತೆ ಬದಿಗೆ ತಂದು ಮಾರಾಟ ಮಾಡುತ್ತಾರೆ. ಮುಂಬೈ, ಪೂನಾ, ತಮಿಳುನಾಡಿಗೆ ರಫ್ತಾಗುವುದರ ಜೊತೆ ನಿಗದಿತ ಪ್ರಮಾಣದಲ್ಲಿ ಹಣ್ಣುಗಳನ್ನು ದಿನವೂ ಈ ಎರಡು ತಿಂಗಳು ರಸ್ತೆ ಬದಿ ಇಟ್ಟು ಮಾರಾಟ ಮಾಡುತ್ತಾರೆ. ದಿನವೊಂದಕ್ಕೆ ಕ್ವಿಂಟಾಲ್ ಗಟ್ಟಲೆ ಹಣ್ಣು ಮಾರಾಟವಾಗುತ್ತದೆ ಎಂದು ಮಾರಾಟಗಾರರು ಹೇಳುತ್ತಾರೆ. ಕೆಜಿಗೆ 160-250 ರವರೆಗೆ ಇಲ್ಲಿ ಹಣ್ಣಿನ ಬೆಲೆಯಿದೆ.  ರಾಜ್ಯ ಹೆದ್ದಾರಿಯಾಗಿರುವುದರಿಂದ ಆಟೋ, ಬೈಕ್, ಬಸ್, ಲಾರಿ, ಕಾರಿನಲ್ಲಿ ಬೇರೆ ಬೇರೆ ಊರಿಗೆ ಹೋಗುವ ಜನ ಇಲ್ಲಿ ಹಣ್ಣು ಒಯ್ಯುತ್ತಾರೆ.