ಮನುಷ್ಯ ಜೀವನದ ಮುಖ್ಯ ಗುರಿ ನೆಮ್ಮದಿ: ಡಾ. ನಂಜುಂಡಪ್ಪ
The main goal of human life is peace said Dr. Nanjundappa
ಧಾರವಾಡ 27: ಮನುಷ್ಯ ಜೀವನದ ಮುಖ್ಯ ಗುರಿ ನೆಮ್ಮದಿ. ವಿಶೇಷವಾಗಿ ವೃದ್ಯಾಪ್ಯದಲ್ಲಿ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿರುವದು ಸಾಮಾನ್ಯ. ಅದಕ್ಕಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನಕ್ಕೆ ಒತ್ತು ನೀಡುವದು ಅವಶ್ಯವೆಂದು ಮಾನಸಿಕ ತಜ್ಞ ಡಾ.ಗೀರೀಶ ಬಾಬು ನಂಜುಂಡಪ್ಪ ಹೇಳಿದರು.
ಧಾರವಾಡ ಲಯನ್ಸ್ ಸಂಸ್ಥೆಯು ಸಲಕಿನಕೊಪ್ಪದ ಆನಂದಾಶ್ರಮ ವೃದ್ಧಾಶ್ರಮದಲ್ಲಿ ಏರಿ್ಡಸಿದ "ಮಾನಸಿಕ ಆರೋಗ್ಯ ಯೋಗಕ್ಷೇಮ ಮತ್ತು ಅನ್ನ ದಾಸೋಹ" ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ವೃದ್ಧರು ಪರಸ್ಪರ ಸಂತೋಷವನ್ನು ಹಂಚಿಕೊಂಡು ,ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಣ್ಣ ಪುಟ್ಟ ಕೆಲಸಗಳಲ್ಲಿ ಭಾಗಿಯಾಗಿ ನೆಮ್ಮದಿ ಕಂಡುಕೊಳ್ಳಬೇಕೆಂದು ತಿಳಿಸಿದರು.
ಆನಂದಾಶ್ರಮ ಟ್ರಸ್ಟ್ ಅಧ್ಯಕ್ಷ ಸುರೇಶ ಕುಲಕರ್ಣಿ ಮಾತನಾಡಿ, ಆನಂದಾಶ್ರಮವನ್ನು ಕಳೆದ 24 ವರ್ಷಗಳಿಂದ ನಡೆಸುತ್ತಿದ್ದು,ಇಲ್ಲಿ ಸ್ವಚ್ಚತೆ,ಆರೋಗ್ಯ ಮತ್ತು ನೆಮ್ಮದಿ ಗಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹಿರಿಯರಿಗೆ ಪೂರೈಸಲಾಗುತ್ತದೆ ಎಂದು ತಿಳಿಸಿದರು.
45ಕ್ಕೂ ಹೆಚ್ಚು ಹಿರಿಯರು ಅನ್ನದಾಸೋಹದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಹಣ್ಣುಗಳನ್ನು ವಿತರಿಸಲಾಯಿತು. ಪೂರ್ಣಿಮಾ ಗಂಭೀರ, ಶೈಲಾ ಕರಗುದರಿ,ಶ್ರೀಕಾಂತ ದೇವಗಿರಿ,ಡಾ.ಕೆ.ವಿ.ಅಚ್ಯುತ,
ನೀತಾ ಕೊಪ್ಪಿಕರ ,ರಶ್ಮೀ ಭಾರದ್ವಾಜ್ ಇತರರು ಇದ್ದರು.
ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಸ್ವಾಗತಿಸಿದರು. ಅಮ್ರತಾ ಜೋಶಿ ಪರಿಚಯಿಸಿದರು. ಡಾ.ರಾಜಶ್ರೀ ಗುದಗನವರ ನಿರೂಪಿಸಿದರು. ಲಯನ್ಸ್ ಕಾರ್ಯದರ್ಶಿ ಸುರೇಶ ಗುದಗನವರ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 