ಶರಣರ ಅಮೂಲ್ಯ ಬದುಕು ನಮಗೆಲ್ಲ ಮಾದರಿ - ಬಿ ಎಸ್ ಹಡಪದ
The invaluable lives of the Sharanas serve as a model for us all – B. S. Hadapada
ಲಕ್ಷ್ಮೆಶ್ವರ 01: ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ ವಸತಿ ನಿಲಯದಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣನವರ 892ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು ಜಯಂತಿ ಆಚರಿಸಿ ಮಾತನಾಡಿದ ವಸತಿ ನಿಲಯದ ವ್ಯವಸ್ಥಾಪಕರು ಮತ್ತು ಶಿಕ್ಷಕರಾದ ಬಿ.ಎಸ್ ಹಡಪದ ಅವರು 12ನೇ ಶತಮಾನದ ಶರಣರ ಅನುಭವ ಮಂಟಪದಲ್ಲಿ ಸಮಾಜ ಸುಧಾರಣೆಗಾಗಿ ಸಮಾಜದ ಬದಲಾವಣೆಗಾಗಿ ತಮ್ಮ ಅಮೂಲ್ಯವಾದ ಬದುಕನ್ನು ಮುಡುಪಾಗಿಟ್ಟು ನಮಗೆಲ್ಲ ಮಾದರಿಯಾಗಿದ್ದಾರೆ ಅಂತ ಮಹಾ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು ಇವರು ಬಸವಣ್ಣನವರ ಅನುಭವ ಮಂಟಪದಲ್ಲಿ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.
ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರಂದರೆ ತುಂಬಾ ಪ್ರಾಣ ಹೀಗಾಗಿ ಅವರನ್ನು ತಮ್ಮ ಆಪ್ತ ಕಾರ್ಯ ದರ್ಶಿಯಾಗಿ ಮಾಡಿ ಕೊಂಡಿದ್ದರು ಹಡಪದ ಅಪ್ಪಣ್ಣನವರು ಸಹ ಮಹಾಶರಣರಾಗಿದ್ದು ಅವರು ಸುಮಾರು 250ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಅವರ ಧರ್ಮಪತ್ನಿ ಲಿಂಗಮ್ಮನವರು ಸಹ ಮಹಾ ಶರಣಿಯಾಗಿದ್ದರು ಅವರು ಸಹ 2 ನೂರಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಅವರ ವಚನಗಳನ್ನು ಓದುವ ಮೂಲಕ ನಮ್ಮ ಜೀವನದ ಬದುಕನ್ನು ಬದಲಾಯಿಸಿಕೊಳ್ಳಬೇಕು ಮಹಾಶರಣರ ಜಯಂತಿ ಆಚರಣೆಯ ಮಾಡುವ ಮೂಲಕ ಪ್ರತಿಯೊಬ್ಬರ ಅವರ ತತ್ವ ಆದರ್ಶಗಳನ್ನು ಪಾಲಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು ಎಂದರು ಈ ಸಮಯದಲ್ಲಿ ವಸತಿ ನಿಲಯದ ಸಿಬ್ಬಂದಿ ವರ್ಗದವರು ನಿಲಯದ ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 