ತ್ಯಾಗ ಬಲಿದಾನ ಮಾನವೀಯತೆಯ ಪ್ರತೀಕವೆ ಪವಿತ್ರ ಬಕ್ರಿದ್ ಹಬ್ಬ ನ್ಯಾಯವಾದಿ: ದಾನೇಶ್ ಅವಟಿ
The holy festival of Bakrid is a symbol of sacrifice and humanity, says lawyer Danesh Avati
ಲೋಕದರ್ಶನ ವರದಿ
ವಿಜಯಪುರ 30: ಇಸ್ಲಾಂ ಧರ್ಮದ ಪ್ರಮುಖ ಪವಿತ್ರ ಹಬ್ಬವಾದ ಬಕ್ರಿದ್, ತ್ಯಾಗ ಬಲಿದಾನ ಮತ್ತು ಮಾನವೀಯತೆಯ ಪ್ರತೀಕ ಎಂದು ನ್ಯಾಯವಾದಿ ದಾನೇಶ ಅವಟಿ ಹೇಳಿದರು. ನಗರ ಹೊರವಲಯ ಬು ರಣಪುರ ರಸ್ತೆಯ ಬಸವ ನಗರ ಬಿ ಬ್ಲಾಕನಲ್ಲಿ ಏರಿ್ಡಸಿದ್ದ ಬಕ್ರಿದ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಧರ್ಮ,ದೇವರ ಮೇಲಿನ ನಂಬಿಕೆ,ತ್ಯಾಗ ಮತ್ತು ಬಲಿದಾನದ ಮಹತ್ವ,ವಿಧೇಯತೆ, ಪರಸ್ಪರ ಹಂಚಿಕೊಳ್ಳುವ ಸಹಕಾರ ಮನೋಭಾವ, ಬಡವರಿಗೆ ಹಸಿದವರಿಗೆ ದಾನ ಮತ್ತು ಸಹೋದರತ್ವವನ್ನು ಸಾರುತ್ತದೆ ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಮೌಲಾನಾ ಮಹಮ್ಮದ್ ಅಸ್ಫಾಕ ಅವರು ಈ ಹಬ್ಬವು ದೇವರ ಮೇಲಿನ ಭಕ್ತಿ.ನಂಬಿಕೆ ಮತ್ತು ತ್ಯಾಗದ ಸಂಕೇತವಾಗಿದೆ. ನಾವು ದುಡಿದ ಹಣವನ್ನು ಸಮಾಜಕ್ಕಾಗಿ ವಿನಿಯೋಗಿಸುವ ವಿಶೇಷವಾಗಿ ಬಡವರು,ಹಾಡಿದವರು,ನೊಂದವರಿಗೆ ಮಾಡುವ ಸಹಾಯ ಇದಾಗಿದೆ,ಸಮಾಜದಲ್ಲಿ ಸಹೋದರತ್ವ,ಶಾಂತಿ,ಏಕತೆ, ಪ್ರೀತಿ ಮತ್ತು ಸಹೋದರತ್ವವನ್ನು ಬಲಪಡಿಸುತ್ತದೆ,ಇಂತಹ ಹಬ್ಬಗಳನ್ನು ಸರ್ವರು ಮಾನವ ಕುಲದ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಪರಸ್ಪರ ಶಾಂತಿ ಸೌಹಾರ್ದ ತೆಯ ಮೂಲಕ ಆಚರಿಸಿ ಸಂಭ್ರಮಿಸಬೇಕೆಂದು ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಏಪಿಜೇ ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ಅಧ್ಯಕ್ಷ ಮಷಾಕ ಕರ್ಜಗಿ ಪ್ರತಿ ವರ್ಷದಂತೆ ಈ ವರ್ಷವೂ ಪವಿತ್ರ ಬಕ್ರಿದ್ ಹಬ್ಬವನ್ನು ಎಲ್ಲರೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಒಳ್ಳೆಯ ಕೆಲಸ ಕಾರ್ಯ ಸಮಾಜ ಸೇವೆ ಮಾಡಲು ಎಲ್ಲರ ಸಹಕಾರ ಆತ್ಯಗತ್ಯ. ಬಸವ ನಗರದ ಗುರು ಹಿರಿಯರು.ಯುವ ಜನತೆ.ಸಹೋದರ ಸಹೋದರಿಯರು ತುಂಬ ಪ್ರೋತ್ಸಾಹ ಸಹಕಾರ ನೀಡುವ ಮೂಲಕ ಅನೇಕ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾಗಿದ್ದು. ಇನ್ನೂ ಮುಂದೆಯೂ ಎಲ್ಲರ ಸಹಕಾರದೊಂದಿಗೆ ಹಲವಾರು ಸೃಜನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದುವೆಂದು ಹೇಳಿ ಎಲ್ಲರಿಗು ಬಕ್ರಿದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮುಕ್ತುಂಸಾಬ್ ಚಪ್ಪರಬಂದ, ಸಯ್ಯದ್ ಸಾಬ್ ನದಾಫ,ಮೈಬು ಸಾಹೇಬ್ ಸಯ್ಯದ್, ದಾವಲ್ ಮಲಿಕ್ ಚಪ್ಪರಬಂದ, ಮೈಬುಬಸಾಬ ದರ್ಗಾ. ಅಬ್ದುಲ್ ಹಮೀದ್ ಪಾನವಾಲೆ,ಮುಂತಾದವರು ವೇದಿಕೆಯಲ್ಲಿ ಉಪಸ್ತಿತರಿದ್ದರು, ಸಲೀಂ ಹಿಪ್ಪರಗಿ ಕುರಾನ್ ಪಠಿಸಿದರು, ಭಾಷಾಸಾಬ್ ಚೌಧರಿ ಸ್ವಾಗತಿಸಿದರು, ಹುಸೇನ್ ಸಾಬ್ ಕೋಣಬಿ ವಂದಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 