ಈ ದೇಶದ ಭವಿಷ್ಯ ಮಕ್ಕಳ ಭವಿಷ್ಯದ ಮೇಲೆ ನಿಂತಿದೆ : ನ್ಯಾಯಾಧೀಶರಾದ ಬಾಲಮುಕುಂದ
ರಾಣೆಬೆನ್ನೂರು 26: ಈ ದೇಶದ ಭವಿಷ್ಯ ಭವಿಷ್ಯದ ಮಕ್ಕಳ ಮೇಲೆ ನಿಂತಿದೆ. ಶಿಕ್ಷಣ ಪಡೆಯುವುದು ಅವರ ಹಕ್ಕು. ಶಿಕ್ಷಣ ನೀಡುವ ಗುರುತರ ಹೊಣೇ ಪಾಲಕರು, ಸರ್ಕಾರ ಮತ್ತು ಶಿಕ್ಷಕ ಸಮುದಾಯದ್ದಾಗಿದೆ ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಅಪರಾಧವಾಗುತ್ತದೆ ಎಂದು ರಾಣೆಬೆನ್ನೂರು 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಬಾಲಮುಕುಂದ ಮುತಾಲಿಕ್ ದೇಸಾಯಿ ಹೇಳಿದರು.
ಅವರು ಇಲ್ಲಿನ ಗಣೇಶ್ ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ದೇವಿಕಾ ಶಾಲಾ ಸಭಾಭವನದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಕಾರ್ಮಿಕ ಇಲಾಖೆ ದೇವಿಕಾ ಶಾಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಎಲ್ಲರಿಗೂ ಶಿಕ್ಷಣ ಸಿಗುವ ಉದ್ದೇಶದಿಂದ ಸರಕಾರ ಶಿಕ್ಷಣ,ಬಟ್ಟೆ, ಪಠ್ಯ ಪುಸ್ತಕ, ಲೇಖನಿ ಸಾಮಗ್ರಿಗಳು ಸೇರಿದಂತೆ ಅವರ ಪರಿಪೂರ್ಣ ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳು ಕಲ್ಪಿಸಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ವೆಚ್ಚದ ಋಣ ಭಾರವಿಲ್ಲದೇ ಶಿಕ್ಷಣ ಸಿಗುವಂತಹ ಸಂದರ್ಭದಲ್ಲಿ ಏನೇನೋ ಕಾರಣದಿಂದ ಬಾಲ ಮಕ್ಕಳಿಗೆ ಶಿಕ್ಷಣ ವಂಚಿತರನ್ನಾಗಿ ಮಾಡುವುದು ಸರಿಯಲ್ಲ ಎಂದು ಹೇಳಿದರು.
ರಾಣೆಬೆನ್ನೂರು ಕಾರ್ಮಿಕ ಇಲಾಖೆ ನೀರೀಕ್ಷಕರಾದ ಎನ್ ದೇವೇಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಲ ಕಾರ್ಮಿಕ ವಿರೋಧಿ ಕಾಯ್ದೆ 1986 ಕುರಿತು ಕಾನೂನು ಸೇವಾ ಸಮಿತಿಯ ಪ್ಯಾನಲ್ ನ್ಯಾಯವಾದಿ ಎಚ್.ಎಸ್. ಸಿದ್ದಪ್ಪನವರ ಅವರು ಉಪನ್ಯಾಸ ನೀಡಿದರು. ಮತ್ತು ಮುಖ್ಯ ಅತಿಥಿಗಳಾಗಿ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಆದಿತ್ಯಕುಮಾರ ಹೆಚ್.ಆರ್. ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್. ಬುರಡಿಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ನ್ಯಾಯವಾದಿ ಸಿ.ಆರ್. ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ, ಅಪರ ಸರ್ಕಾರಿ ವಕೀಲರಾದ ಟಿ. ಎಸ್. ಜಂಗರಡ್ಡೇರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಾಘವೇಂದ್ರ ಶಿರೂರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ವಿಜಯಾ ಬಣಕಾರ, ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ದೇವಿಕಾರಾಣಿ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ನಾಜಿಯಾ ಕೊತ್ವಾಲ್, ಸೇರಿದಂತೆ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಇಲಾಖೆಯ ಸಿಬ್ಬಂದಿ, ನ್ಯಾಯವಾದಿಗಳು ಮತ್ತಿತರ ಗಣ್ಯರು ಮತ್ತು ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.