ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಒಂದೇ ನಾಣ್ಯದ ಎರಡು ಮುಖಗಳಂತೆ: ಡಾ. ಹೊಸಮಠ

ಲೋಕದರ್ಶನ ವರದಿ 

ಬೆಳಗಾವಿ,3: ಬೆಳಗಾವಿಯ ಮಹಾಂತೇಶನಗರದ ಮಹಾಂತ ಭವನದಲ್ಲಿ ಕನರ್ಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇದರ ವತಿಯಿಂದ ಬೆಳಗಾವಿ ವಿಭಾಗ ಮಟ್ಟದ ವ್ಯಾಪ್ತಿಗೆ ಒಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ಸದಸ್ಯರು, ನಿದರ್ೇಶಕರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿದ್ದು ಸದರಿ ಕಾಯರ್ಾಗಾರದ ಉದ್ಘಾಟನೆಯನ್ನು             ಕೆ.ಎಲ್. ಶ್ರೀನಿವಾಸ, ಸಹಕಾರ ಸಂಘಗಳ ಉಪನಿಬಂಧಕರು. ಬೆಳಗಾವಿ ಜಿಲ್ಲೆ ಇವರು ನೆರವೇರಿಸಿದರು. 

ಕಾಯರ್ಾಗಾರದ ಅಧ್ಯಕ್ಷತೆಯನ್ನು ಮಹಾಮಂಡಳದ ಅಧ್ಯಕ್ಷರಾದ ಸಿ.ಎಂ.ಮಾರೇಗೌಡರವರು ವಹಿಸಿದ್ದರು. ಮುಖ್ಯಅತಿಥಿಗಳಾಗಿ ಮಹಾಮಂಡಳದ ಉಪಾಧ್ಯಕ್ಷರಾದ ಡಾ|| ಸಂಜಯ ಪಂಚಾಕ್ಷರಿ ಹೊಸಮಠ, ರಾಜ್ಯ ಸಹಕಾರ ಮಹಾಮಂಡಳದ ನಿದರ್ೆಶಕರಾದ ಬಸವರಾಜ್ ಎಸ್ ಸುಲ್ತಾನ್ ಪುರಿ, ಪತ್ತಿನ ಮಹಾಮಂಡಳದ ನಿದರ್ೆಶಕರುಗಳಾದ ಗುರುರಾಜ ಹುಣಸಿಮರದ. ತಮ್ಮಣ್ಣ ಬಾಲಪ್ಪ ಕೆಂಚರಡ್ಡಿ, ಎಂ.ಜೆ.ನರೇಂದ್ರಕುಮಾರ, ಧರೇಪ್ಪ ಮಹದೇವ ಅಲಗೂರ, ಜಿ.ಮಲ್ಲಿಕಾಜರ್ುನಯ್ಯ, ಮತ್ತು ಕೆ.ನಾರಾಯಣರವರು, ಅತಿಥಿಗಳಾಗಿ ಬಸಗೌಡ ದುಂ ಪಾಟೀಲ,  ಅಧ್ಯಕ್ಷರು, ಜಿಲ್ಲಾ ಸಹಕಾರಿ ಯೂನಿಯನ್, ಬೆಳಗಾವಿ ಜಿಲ್ಲೆ ಇವರು ಉಪಸ್ಥಿತರಿದ್ದರು.

ಮುಂದುವರೆದು ಮಹಾಮಂಡಳದ ಉಪಾಧ್ಯಕ್ಷರಾದ ಡಾ|| ಸಂಜಯ ಪಂ. ಹೊಸಮಠ ರವರು ಹಾಜರಿದ್ದ ಎಲ್ಲಾ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಸಹಕಾರ ಸಂಘಗಳ ಆಡಳಿತಮಂಡಳಿ ಮತ್ತು ಸಿಬ್ಬಂದಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸುತ್ತಾ ಆಡಳಿತಮಂಡಳಿ ಮತ್ತು ಸಿಬ್ಬಂದಿಗಳು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಅಗತ್ಯ ಮಾಹಿತಿಗಳನ್ನು ಹಾಜರಿದ್ದ ಪ್ರತಿನಿಧಿಗಳಿಗೆ ತಿಳಿಸಿದರು.

ಕಾಯರ್ಾಗಾರವನ್ನು ಉಧ್ಘಾಟಿಸಿ ಮಾತನಾಡಿದ ಸಹಕಾರ ಸಂಘಗಳ ಉಪನಿಬಂಧಕರಾದ ಕೆ.ಎಲ್. ಶ್ರೀನಿವಾಸ್ರವರು ಮಾತನಾಡಿ ಸಹಕಾರ ಸಂಘಗಳ ಕಾಯ್ದೆಯಲ್ಲಿನ ಇತ್ತೀಚಿನ ಬದಲಾವಣೆ ಹಾಗು ಕಾನೂನಿನ ಅಂಶಗಳ ಬಗ್ಗೆ ಶಿಬಿರಾಥರ್ಿಗಳಿಗೆ ಮನವರಿಕೆ ಮಾಡಿದರು. 

ಮುಖ್ಯ ಅತಿಥಿಗಳ ಭಾಷಣವಾಗಿ ರಾಜ್ಯ ಸಹಕಾರ ಮಹಾಮಂಡಳದ ನಿದರ್ೆಶಕರಾದ ಬಸವರಾಜ ಎಸ್ ಸುಲ್ತಾನಪುರಿ ಮತ್ತು ಕನರ್ಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿದರ್ೆಶಕರಾದ ಗುರುರಾಜ್ ಹುಣಸಿಮರದರವರು ಮಾತನಾಡಿ ಕಾಯರ್ಾಗಾರ ಮೌಲ್ಯದ ಬಗ್ಗೆ ತಿಳಿಸಿದರು. 

ಕಾಯರ್ಾಗಾರದ ಅಧ್ಯಕ್ಷತೆಯ ಭಾಷಣವನ್ನು ಮಹಾಮಂಡಳದ ಅಧ್ಯಕ್ಷರಾದ ಸಿ.ಎಂ.ಮಾರೇಗೌಡರವರು ಮಾತನಾಡಿ "ಕಾಯರ್ಾಗಾರಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರಿಂದ ಹೆಚ್ಚಿನ ಜ್ಞಾನರ್ಜನೆಯನ್ನು ಪಡೆದುಕೊಳ್ಳಬಹುದು" ಎಂದು ತಿಳಿಸುತ್ತಾ ಸಹಕಾರ ಸಂಘಗಳ ಆಡಳಿತವನ್ನು ನಿರ್ವಹಿಸಲು ಪ್ರಸ್ತುತ ಶಿಕ್ಷಣ ತರಬೇತಿ ಕಾಯರ್ಾಗಾರಗಳಲ್ಲಿ ಭಾಗವಹಿಸುವುದರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಮುಂದುವರೆದು ಮಹಾಮಂಡಳವು ಒಂದು ಸ್ವಂತ ನಿವೇಶನವನ್ನು ಹೊಂದಿದ್ದು ಕಟ್ಟಡ ನಿಮರ್ಾಣಕ್ಕೆ ಸಹಕಾರ ಸಂಘಗಳಿಂದ ದೇಣಿಗೆಯ ಅವಶ್ಯವಿದ್ದು ಎಲ್ಲಾ ಸಹಕಾರ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ನೀಡಿ ಕಟ್ಟಡ ನಿಮರ್ಾಣಕ್ಕೆ ಸಹಕರಿಸಬೇಕಾಗಿ ಕೋರಿಕೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಹಾಮಂಡಳದ ನಿದರ್ೆಶಕರಾದ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿರವರ ಶ್ರೀ ಚೈತನ್ಯ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ನಿ., ಮೂಡಲಗಿ ಈ ಸಹಕಾರ ಸಂಘವು ಮಹಾಮಂಡಳದ ಕಟ್ಟಡ ನಿಮರ್ಾಣಕ್ಕೆ ರೂ. 2,50,000/-ಗಳ (ಎರಡು ಲಕ್ಷ ಐವತ್ತು ಸಾವಿರ) ಚೆಕ್ಕನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಸದರಿ ಸಹಕಾರ ಸಂಘದ ಆಡಳಿತಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿದರ್ೆಶಕರುಗಳನ್ನು ಮಹಾಮಂಡಳವು ಗೌರವಿಸಿ ಸನ್ಮಾನಿಸಿದರು.

ಕಾಯರ್ಾಗಾರದಲ್ಲಿ ವಿಷಯ ಉಪನ್ಯಾಸಕರುಗಳಾಗಿ ಹೆಚ್.ಎಸ್. ನಾಗರಾಜಯ್ಯ, ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ರವರು "ಸಹಕಾರ ಸಂಘಗಳಲ್ಲಿ ಸಾಲ ವಸೂಲಾತಿ ಮತ್ತು ಚುನಾವಣಾ ನಿಯಮಗಳ" ಬಗ್ಗೆ ಉಪನ್ಯಾಸ ಮಾಡಿದರು. ಹಾಗೂ ಅನಿಲ್ ಭಾರಧ್ವಾಜ್ ಸನ್ನದು ಲೆಕ್ಕಪರಿಶೋಧಕರು ಇವರು "ಸಹಕಾರ ಸಂಘಗಳಲ್ಲಿ ಆದಾಯ ತೆರಿಗೆ ಮತ್ತು ಜಿಎಸ್.ಟಿ" ಯ ಕುರಿತು ಉಪನ್ಯಾಸ ನೀಡಿದರು. ಮಹಾಮಂಡಳದ ಸಲಹೆಗಾರರಾದ ಕೆ.ಎಸ್. ಗುರುಪ್ರಸಾದ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು ಹಾಗೂ ನಿದರ್ೆಶಕರಾದ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿರವರು ಅಂತಿಮವಾಗಿ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ 600ಕ್ಕು ಹೆಚ್ಚಿನ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ನಿದರ್ೆಶಕರು ಮತ್ತು ಸಿಬ್ಬಂದಿಗಳು ಮತ್ತು ಮಹಾಮಂಡಳದ ಸಿಬ್ಬಂದಿಗಳಾದ ಎಂ.ಹೆಚ್. ಸುರೇಶ್ ಮತ್ತು ಮಹೇಶು ರವರು ಕಾಯರ್ಾಗಾರದಲ್ಲಿ ಹಾಜರಿದ್ದರು.