ಮಲಗಿದ್ದ ಮಗು ಚಿರತೆಗೆ ಬಲಿ
ರಾಮನಗರ, ಮೇ 9, ಮನೆಯಲ್ಲಿ ಮಲಗಿದ್ದ 3 ವರ್ಷದ ಗಂಡು ಮಗುವನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ತಿಂದಿರುವ ಘಟನೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಚಂದ್ರಣ್ಣ ಹಾಗೂ ಮಂಗಳಗೌರಮ್ಮ ದಂಪತಿಯ ಮಗನಾದ ಹೇಮಂತ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ.ಬೇಸಿಗೆ ಕಾಲವಿದ್ದರಿಂದ ಸೆಕೆ ಹೆಚ್ಚಾದ ಹಿನ್ನೆಲೆಯಲ್ಲಿ ದಂಪತಿ ಬಾಗಿಲು ತೆರೆದು ಮಲಗಿದ್ದರು. ಈ ವೇಳೆ ಏಕಾಏಕೀ ಮನೆಗೆ ನುಗ್ಗಿದ ಚಿರತೆ ಮಗುವನ್ನು ಹೊತ್ತೊಯ್ದಿದೆ. ಎಚ್ಚರಗೊಂಡ ಬಳಿಕ ಪೋಷಕರು ಆತನನ್ನು ಹುಡುಕಲು ಆರಂಭಿಸಿದ್ದಾಗ ಮನೆಯಿಂದ ಸ್ವಲ್ಪ ದೂರದ ಪೊದೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ.ತಡರಾತ್ರಿ ಮಳೆಯಾದ ಹಿನ್ನೆಲೆಯಲ್ಲಿ ಮನೆಯಲ್ಲಿ ವಿದ್ಯುತ್ ಇಲ್ಲದಿರುವುದರಿಂದ ದಂಪತಿ ಬಾಗಿಲು ತೆರೆದು ಮಲಗಿದ್ದರು ಎನ್ನಲಾಗಿದೆ.ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 