ಶ್ರೀಗಳ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ಸಂಪನ್ನ
The Palakki festival of the Lord is filled with devotion
ಉಗರಗೋಳ 21: ಆತ್ಮವಿಶ್ವಾಸ, ಪ್ರಯತ್ನ ಹಾಗೂ ಕ್ರಿಯಾಶೀಲತೆ ಇವು ಜೀವನದ ಯಶಸ್ಸಿನ ಗುಟ್ಟುಗಳು. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಚಿಕ್ಕುಂಬಿಯ ಅಜಾತ ನಾಗಲಿಂಗಮಠದ ಪೀಠಾಧಿಪತಿ ಅಭಿನವ ನಾಗಲಿಂಗ ಶ್ರೀಗಳು ಹೇಳಿದರು. ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದಲ್ಲಿ ಜರುಗಿದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ 145ನೇ ಪುಣ್ಯಾರಾಧಣೆಯ ಕಾರ್ಯಕ್ರಮದ ಅಂಗವಾಗಿ. ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ಯುವ ಪೀಳಿಗೆ ಶರಣರ, ಸಾಧುಸಂತ, ಮಹಾಂತರ ಪ್ರವಚನ ಆಲಿಸುವದರಿಂದ ಮನುಷ್ಯನ ಮನಸ್ಸು ಶಾಂತತೆಯತ್ತ ವಾಲುತ್ತದೆ ಎಂದು ನುಡಿದರು.
ಸುಮಂಗಲಿಯರ ಆರತಿ, ಬಜನೆ, ಕರಡಿ ಮಜಲು, ಬಾಜಾಬಜಂತ್ರಿಗಳೊಂದಿಗೆ ನಾಗಲಿಂಗ ಮಹಾಸ್ವಾಮಿಗಳ ಪಲ್ಲಕ್ಕಿ ಉತ್ಸವವು ಗ್ರಾಮದಲ್ಲಿ ಜರುಗಿತು. ಬೆನಕನಕೊಪ್ಪದ ಶಿವಾನಂದ ಶ್ರೀಗಳು, ಶಿವಯೋಗಿ ತಾಯಿ, ರಾಹುಲ ಸಂಗ್ರೇಶ, ಪಿ ಎಮ್ ತೋರಗಲ್ಲ್, ಮಮ್ಮದಲಿ ದೊಡಮನಿ, ಎಸ್ ಬಿ ವಾರೇಪ್ಪನವರ, ಮಲ್ಲಪ್ಪ ಬಡಿಗೇರ, ನಿಂಗನಗೌಡ್ರ ಸಂಗನಗೌಡ್ರ, ರಂಗಪ್ಪ ಜಂಬಳ್ಳಿ, ಮಂಜುನಾಥ ಸಂಗ್ರೇಶ, ಪ್ರಭು ಗೊವಣ್ಣವರ, ಅಶೋಕ ಕರಿ, ಪುಂಡಲೀಕ ಗೊವಣ್ಣವರ, ರಂಗನಾಥ ಸಂಗ್ರೇಶಿ, ಪಕ್ಕಿರ್ಪ ತಳವಾರ, ಸಚಿನ ಸಂಗ್ರೇಶ, ಮಾಂತೇಶ ಸಂಗ್ರೇಶ, ಈಶ್ವರ ಕುರಿ, ನಾಗನಗೌಡ ಮೇನಸಿನಕಾಯಿ, ಉಮೇಶ ಮೇನಸಿನಕಾಯಿ ಹಾಗೂ ಗ್ರಾಮಸ್ಥರು, ಶರಣರು, ಸಂತರು, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು 