ಕವಿ ಸುರೇಶ ಅಂಗಡಿ ರಚಿತ ಗಾಳಿಪಟ ಲೋಕಾರೆ್ಣ
ಹೂವಿನ ಹಡಗಲಿ 10: ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತುಂಗಭದ್ರಾ ಸರಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಮಂಗಳವಾರ ಸಿಂಚನ ಪ್ರಕಾಶನ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಮೇ ಸಾಹಿತ್ಯ ಮೇಳ ಸಹಯೋಗದಲ್ಲಿ ಕವಿ ಮುಖ್ಯಗುರು ಸುರೇಶ ಅಂಗಡಿ ಅವರ ಮಕ್ಕಳ ಪದ್ಯಗಳು ’ಗಾಳಿಪಟ’ ಪುಸ್ತಕ ಲೋಕಾರೆ್ಣ ಮಾಡಿ ಮಾತನಾಡಿದರು.ಕನ್ನಡ ಸಾಹಿತ್ಯದ ಮೇರು ಕವಿ ಲೇಖಕರ ಹೊತ್ತಿಗೆಗಳನ್ನು ಹೆಚ್ಚು ಓದುವ ಪರಿಪಾಠ ಮಕ್ಕಳು ಬೆಳೆಸಿಕೊಳ್ಳಬೇಕು.
ಮಕ್ಕಳು ಇಷ್ಟಪಟ್ಟು ಓದುವ ನಿಟ್ಟಿನಲ್ಲಿ ಗಾಳಿಪಟದಲ್ಲಿ ಕವಿತೆಗಳು ಮೂಡಿ ಬಂದಿವೆ ಎಂದು ತಿಳಿಸಿದರು.ಸಾಹಿತಿ ಶಾಂತಮೂರ್ತಿ ಬಿ ಕುಲಕರ್ಣಿ ಗಾಳಿಪಟ ಕೃತಿ ಅವಲೋಕಿಸಿ ಮಕ್ಕಳ ಅಭಿರುಚಿಗೆ ತಕ್ಕಂತೆ ಪದ್ಯಗಳನ್ನು ರಚಿಸಿದ್ದಾರೆ.ಸತ್ಯ ಶೋಧನೆ ಮಾಡುವ ಶಕ್ತಿ ಕವಿತೆಗಳಿಗಿದೆ. ಕವಿಗಳು ಸತ್ಯದ ಆರಾಧಕರು ಎಂದು ಬಣ್ಣಿಸಿದರು.ಆನೆ, ಲೆಕ್ಕ, ಆಟೋ, ಮಾರ್ಕ್ಸ ಕಾರ್ಡ, ನ್ಯೂಟನ್, ಮಳೆ ಚಪ್ಪಲಿ, ನಿಂಬೆಯ ಕಂಬನಿ, ಶಾಲೆ, ಈರುಳ್ಳಿ ವ್ಯಥೆ, ಗಾಳಿಪಟ, ವಿಜ್ಞಾನ, ವಿಮಾನ,ಚಪ್ಪಲಿ, ಚೆಂಡು, ತುಂಟರು ಮೊದಲಾದ ಕವಿತೆಗಳು ಸೊಗಸಾಗಿ ಮೂಡಿಬಂದಿವೆ ಎಂದು ಹೇಳಿದರು.ಪುಟಾಣಿಗಳದೇ ಒಂದು ಜಗತ್ತು.
ಅದರೊಳಗೆ ಇಳಿಯುವುದು. ಇಳಿದು ಒಂದಾಗಿ ಹೋಗುವುದು ಅದು ವಿಸ್ಮಯ ಸಂಗತಿ. ಮಕ್ಕಳ ಭಾವನೆಗಳನ್ನು ನವಿರಾಗಿ ಚುರುಕಾಗಿ ಅದ್ಭುತವಾಗಿ ಕವಿ ಗಾಳಿಪಟದಲ್ಲಿ ಅನಾವರಣ ಗೊಳಿಸಿದ್ದಾರೆ ಎಂದು ತಿಳಿಸಿದರು.ಸರಕಾರಿ ನೌಕರರ ಸಂಘದ ಅಧ್ಯಕ್ಷ ಎ ಕೊಟ್ರಗೌಡ ಮಾತನಾಡಿದರು.ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್ ಮಲ್ಲಿಗೆ ಪ್ರಕಾಶನದ ಎಲ್ ಖಾದರಭಾಷಾ ಮಾತನಾಡಿದರು.ಸಾಹಿತಿ ಇಸ್ಮಾಯಿಲ್ ಯಲಿಗಾರ್ ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಚು ಸಾ ಪ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ಸಿಂಚನ ಪ್ರಕಾಶನದ ಸವಿತಾ ಅಂಗಡಿ, ಟಿ ಎಂ ನಾಗಭೂಷಣ ಉಪಸ್ಥಿತರಿದ್ದರು.ಶಿಕ್ಷಕ ಸ್ವಾಮಿನಾಥ ರಾಮಸ್ವಾಮಿ ಬಸವರಾಜ ಆನಂದ್ ಜಿ ಗೀತಾ ಪಿ ಎಂ ಪ್ರತಿಮಾ ಎನ್ ರೇಖಾ ಎಸ್ ಸಂಗಮೇಶ ಸುಂಕದ ಪ್ರಸಾದ್ ಸಂತೋಷ್ ಕುಮಾರ್ ಎಸ್ ರಾಕೇಶ್ ರೆಡ್ಡಿ ಇದ್ದರು.ಪ್ರಿಯಾಂಕ ಸಂಗಡಿಗರು ಮಾನವರಾಗೋಣ ಗೀತೆ ಹಾಡಿದರು.ಸೊಪ್ಪಿನ ಪೂರ್ವಿ ಮಾನಸ ಕೆ ಗೊರವರ ಅಕ್ಷತಾ ನಿರ್ವಹಿಸಿದರು.