ಹಳೆಕೋಟೆ ಜಮೀನು ನಮ್ಮ ಕುಟುಂಬಕ್ಕೆ ಸೇರಿದ್ದು ಅದರ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ : ಹನುಮರೆಡ್ಡಿ ಸ್ಪಷ್ಟನೆ
The Halekote land belongs to our family, and we possess all the relevant documents: Hanumareddy clar
ಬಳ್ಳಾರಿ. ಆ. 21 : ಜಿಲ್ಲೆಯ ಸಿರುಗುಪ್ಪ ತಾಲೂಕಿನ 64 ಹಳೆಕೋಟೆ ಗ್ರಾಮದ ಸರ್ವೆ ನಂಬರ್ 83, 84,85, 91 ಬಿ, 92, 97 ಮತ್ತು 126 ಬಿ ಗೆ ಸಂಬಂಧಿಸಿದ ಸುಮಾರು 75 ಎಕರೆ ಜಮೀನು ನಮ್ಮ ತಂದೆ ಯರ್ರಮ್ ಅಂಜಿ ರೆಡ್ಡಿ ಮತ್ತು ಅವರ ಪತ್ನಿ ಯರ್ರಮ್ ಕೋಟೇಶ್ವರಮ್ಮ ಅವರು ನ್ಯಾಯಯುತವಾಗಿ 3 ಮೇ , 2014ನೇ ಇಸ್ವಿಯಲ್ಲಿ ಖರೀದಿಸಿದ ಜಮೀನಾಗಿರುತ್ತದೆ ಈಗ ಕೆಲವು ಜನ ರೈತರು ಈ ಭೂಮಿಯ ಕುರಿತು ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಈ ಜಮೀನು ನಮ್ಮ ಕುಟುಂಬಕ್ಕೆ ಸೇರಿದ್ದಾಗಿದೆ ಮತ್ತು ಇದಕ್ಕೆ ಸಂಬಂಧಿಸಿದ ರಿಜಿಸ್ಟರ್ ಡಾಕ್ಯುಮೆಂಟ್ ಆರ್ ಟಿ ಸಿ ಸೇರಿದಂತೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಅಂಜಿ ರೆಡ್ಡಿ ಪುತ್ರ ಹನುಮರೆಡ್ಡಿ ಸ್ಪಷ್ಟನೆ ನೀಡಿದರು. ಈ ಘಟನೆಯ ಕುರಿತು ಮಾಧ್ಯಮ ವರದಿಗಾರರನ್ನು ಸಂಪರ್ಕಿಸಿದ ಅಂಜಿ ರೆಡ್ಡಿ ಮಗ ಹನುಮರೆಡ್ಡಿ ಅವರು ಮಾಹಿತಿ ನೀಡಿ ಈ ಮೇಲ್ಕಂಡ ಸರ್ವೆ ನಂಬರ್ ಗಳ ಜಮೀನಿನ ಕುರಿತು ಕೆಲವು ಹಳೆಕೋಟೆ ಗ್ರಾಮದ ರೈತರು ಮತ್ತು ರೈತ ಮುಖಂಡರುಗಳು ನಮ್ಮ ಜಮೀನಿನ ಕುರಿತು ಸುಳ್ಳು ಮತ್ತು ಸುಖಾ ಸುಮ್ಮನೆ ಗೊಂದಲಗಳನ್ನು ಸೃಷ್ಟಿ ಸುತ್ತಿದ್ದಾರೆ ಎಂದರು.
ಇದಕ್ಕೂ ಮೊದಲು ಮೇಲ್ಕಂಡ ಜಮೀನಿನ ಮೇಲೆ ಮದರಾಸಿನ ಪುರಂ ಪ್ರಕಾಶ್ ರಾವ್ ಅವರು ತಮ್ಮ ಮೋಜೈಕ್ ಇಂಡಿಯ ಲಿಮಿಟೆಡ್ ಸಂಸ್ಥೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಡವಿಟ್ಟು ಸಾಲವನ್ನು ಪಡೆದಿದ್ದರು. ಈ ಸಾಲವನ್ನು ಸಕಾಲದಲ್ಲಿ ತೀರಿಸಲು ಸಾಧ್ಯವಾಗದ ಕಾರಣ ಬ್ಯಾಂಕ್ ಈ ಜಮೀನನ್ನು ಹರಾಜು ಹಾಕಲಾಗಿತ್ತು. ಈ ಸಂದರ್ಭದಲ್ಲಿ ಹರಾಜಿನಲ್ಲಿ ಪಿ ವೇಣುಗೋಪಾಲ್ ಎನ್ನುವವರು ಹತ್ತು ಸಾವಿರ ರೂಪಾಯಿಗಳಿಗೆ ಬಿಡ್ ಮಾಡಿ 25ಅ ಹಣವನ್ನು ಪಾವತಿ ಮಾಡಿದ್ದರು. ನಂತರ ಉಳಿದ ಮೊತ್ತವನ್ನು ಪಾವತಿಸಲಾಗದೆ ಸುಮಾರು 14 ವರ್ಷಗಳ ನಂತರ ಮತ್ತೆ ಉಳಿದ ಹಣವನ್ನು ಪಾವತಿಸಲು ಬ್ಯಾಂಕಿಗೆ ಸಂಪರ್ಕಿಸಿದಾಗ, ಸರಿಯಾದ ಸಮಯಕ್ಕೆ ಉಳಿದ ಹಣ ಪಾವತಿಸಲು ಸಾಧ್ಯವಾಗದ ಕಾರಣ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದರು. ಈ ವಿಷಯದ ಕುರಿತು ವೇಣುಗೋಪಾಲ್ ಕರ್ನಾಟಕ ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿಕೊಂಡಿದ್ದರು. ಆದರೆ ಇದನ್ನು ಮಾನ್ಯ ಮಾಡಿದ ಹೈಕೋರ್ಟ್ ಅವರು ಅಡ್ವಾನ್ಸ್ ಆಗಿ ಸಲ್ಲಿಸಿದ 25ಅ ಹಣವನ್ನು ಮರುಪಾವತಿಸುವಂತೆ ಬ್ಯಾಂಕಿಗೆ ಆದೇಶಿಸಿತು.
ಸದರಿ ಜಮೀನನ್ನು ಪುರಂ ಪ್ರಕಾಶ್ ರಾವ್ ಮತ್ತು ಪುರಂ ಪ್ರಭಾಕರ್ ರಾವ್ ಅವರಿಂದ ಅವರ ಮೊಮ್ಮಕ್ಕಳಾದ ಪಿ ವಿ ಆರ್ ಪ್ರಕಾಶ್ ಮತ್ತು ಪಿ ವಿ ಎಸ್ ಭಾರದ್ವಾಜ್ ಇವರುಗಳು ಸದರಿ ಜಮೀನಿನ ಸಂಪೂರ್ಣ ಹಕ್ಕನ್ನು ಜಿಪಿಎ ಮೂಲಕ ನನ್ನ ತಂದೆ ಪಡೆದುಕೊಂಡಿದ್ದು ಅದರ ಮೇಲಿನ ಸಾಲವನ್ನು ಎಸ್ಬಿಐ ಬ್ಯಾಂಕಿಗೆ ಪಾವತಿಸಿ ನೋ ಡಿವ್ ಸರ್ಟಿಫಿಕೇಟ್ ಪಡೆದುಕೊಳ್ಳಲಾಯಿತು. ನಂತರದ ದಿನಗಳಲ್ಲಿ ಆ ಜಮೀನನ್ನು ಅಂದರೆ 2014ರಲ್ಲಿ ನಮ್ಮ ಕುಟುಂಬ ಖರೀದಿಸಿ ನಮ್ಮ ತಂದೆ ಅಂಜಿ ರೆಡ್ಡಿ ಹೆಸರಿಗೆ ಮತ್ತು ನಮ್ಮ ತಾಯಿ ಅವರ ಹೆಸರಿಗೆ ನೊಂದಣಿ ಮಾಡಿಸಿಕೊಂಡಿತು. ಕೆಲವೊಂದು ಕಾರಣಗಳಿಂದ ಆ ಜಮೀನಿನಲ್ಲಿ ನಮಗೆ ಉಳಿಮೆ ಮಾಡಿಕೊಂಡಿರಲು ಸಾಧ್ಯವಾಗಿರುವುದಿಲ್ಲ ಆದರೂ ಕೂಡ ನಾವು ಆ ಜಮೀನಿಗೆ ಇಲ್ಲಿಯವರೆಗೂ ತೆರಿಗೆಯನ್ನು ಕಟ್ಟುತ್ತಾ ಕಾಲಕಾಲಕ್ಕೆ ದಾಖಲೆಗಳನ್ನು ಪಡೆಯುತ್ತಾ ನಮ್ಮ ಸ್ವಾಧೀನ ಅನುಭವದಲ್ಲಿ ಇರುತ್ತದೆ. ಕೆಲವೊಂದು ರೈತ ಮುಖಂಡರು ಖಾಲಿ ಇರುವ ನಮ್ಮ ಹೊಲದ ಮೇಲೆ ಕಣ್ಣು ಹಾಕಿ ಕೆಲವು ರೈತರನ್ನು ಹುರಿದುಂಬಿಸಿ ಈ ಭೂಮಿ ನಮಗೆ ಸೇರಿದ್ದು ಹಲವು ವರ್ಷಗಳಿಂದ ಈ ಜಮೀನಿಮಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದೇವೆ ಎಂದು ಗೊಂದಲವನ್ನು ಉಂಟು ಮಾಡುತ್ತಿದ್ದಾರೆ, ಇದೆಲ್ಲವೂ ಸುಳ್ಳು ಮತ್ತು ಕಟ್ಟು ಕತೆಯಗಿರುತ್ತದೆ ನಮ್ಮ ಜಮೀನಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹನುಮರೆಡ್ಡಿ ತಿಳಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 