ಭಕ್ತಿಯ ಹೊನಲು ಹರಿಸಿದ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ

ಭಕ್ತಿಯ ಹೊನಲು ಹರಿಸಿದ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ  The Grand Concluding Celebration of the Sri Sharanabasaveshwara Purana: A Flow of Devotion


ಯಲಬುರ್ಗಾ, ಸೆ.15: ಹಬ್ಬ-ಹರಿದಿನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ, ಭಾವೈಕ್ಯತೆ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸುವುದರ ಮೂಲಕ ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಿಸುತ್ತವೆ ಎಂದು ಜಿಗೇರಿ ಗುರುಸಿದ್ದೇಶ್ವರ ಸ್ವಾಮೀಜಿ ಹೇಳಿದರು.  

ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನದ ಮಹಾಮಂಗಲೋತ್ಸವದಲ್ಲಿ ಸೋಮವಾರ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.  

ಶ್ರೀ ಶರಣಬಸವೇಶ್ವರರ ಪುರಾಣವನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜತೆಗೆ ಜೀವನದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ಸಿಗುತ್ತದೆ. ಒಂದು ತಿಂಗಳ ಕಾಲ ನಿರಂತರವಾಗಿ ಪುರಾಣ ಪ್ರವಚನದ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಅರಿವು ಮೂಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.  

ಎಲ್ಲರ ಒಳಿತಿಗಾಗಿ ಬಸವಲಿಂಗೇಶ್ವರ ಸ್ವಾಮೀಜಿ ಶ್ರಮಿಸುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಭಕ್ತಿ, ಶಾಂತಿ ಹಾಗೂ ಸೌಹಾರ್ದತೆ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.  

ಭವ್ಯ ಮೆರವಣಿಗೆ: ಮಹಾಮಂಗಲೋತ್ಸವದ ಅಂಗವಾಗಿ ಎತ್ತಿನ ಚಕ್ಕಡಿಯಲ್ಲಿ ಶ್ರೀಗಳ ಭವ್ಯ ಮೆರವಣಿಗೆ ನಡೆಯಿತು. ಬಸವಲಿಂಗೇಶ್ವರ ಸ್ವಾಮೀಜಿ, ಜಿಗೇರಿ ಗುರುಸಿದ್ದೇಶ್ವರ ಸ್ವಾಮೀಜಿ ಹಾಗೂ ಶ್ರೀ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಮೆರವಣಿಗೆ ಜರುಗಿತು.  

ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಬಾಜೆಮೇಳ ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಭಾವದ ವಾತಾವರಣ ನಿರ್ಮಿಸಿದವು. ಮಹಿಳೆಯರು ಕುಂಭ-ಕಳಸಗಳನ್ನು ಹೊತ್ತು ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ವಿವಿಧ ವಾದ್ಯಮೇಳಗಳ ನಾದ, ಭಜನೆ ಹಾಗೂ ಭಕ್ತರ ಸಂಭ್ರಮದಿಂದ ಮೆರವಣಿಗೆ ಕಳೆಗಟ್ಟಿತು.  

ಭಕ್ತರಿಗೆ ಅನ್ನಸಂತರೆ​‍್ಣ: ಮಹಾಮಂಗಲೋತ್ಸವದ ಅಂಗವಾಗಿ ಶ್ರೀಮಠಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನಸಂತರೆ​‍್ಣ ಏರಿ​‍್ಡಸಲಾಗಿತ್ತು. ಭಕ್ತರು ಶ್ರದ್ಧಾಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.  

ಈ ಸಂದರ್ಭದಲ್ಲಿ ವೀರಣ್ಣ ಹುಬ್ಬಳ್ಳಿ, ಬಸವಲಿಂಗಪ್ಪ ಸ್ಟಾಂಪಿನ್, ಶಿವಕುಮಾರ್ ಭೂತೆ, ಈಶಪ್ಪ ಸ್ಟಾಂಪಿನ್, ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ಬಸಲಿಂಗಪ್ಪ ಕೊತ್ತಲ, ಅಡವಯ್ಯ ಕಲ್ಯಾಣಮಠ, ಮಹೇಶ ಹುಬ್ಬಳ್ಳಿ, ಕಳಕಪ್ಪ ಗದ್ದಿ, ಮಲ್ಲಪ್ಪ ಭೂತೆ, ಈಶಪ್ಪ ಬನ್ನಿಕೊಪ್ಪ, ಬಸವರಾಜ ಕೊಳ್ಳಿ, ಶಿವಕುಮಾರ್ ಸಾದರ, ಮುತ್ತು ಬಂಡಿ, ಶರಣಪ್ಪ ದಿವಟರ್, ಉಮೇಶ ಕುಂಬಾರ, ಮಲ್ಲಪ್ಪ ಗದ್ದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.