ರಾಜ್ಯದಲ್ಲಿ ಬರೋಬ್ಬರಿ 84 ಕೊರೋನಾ ಪ್ರಕರಣ, ಸೋಂಕಿತರ ಸಂಖ್ಯೆ 1231ಕ್ಕೇರಿಕೆ
ಬೆಂಗಳೂರು, ಮೇ18, ರಾಜ್ಯದಲ್ಲಿ ಸೋಮವಾರ ಬರೋಬ್ಬರಿ 84 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1231ಕ್ಕೇರಿಕೆಯಾಗಿದೆ. ಇದು ಇಲ್ಲಿಯವರೆಗೆ ರಾಜ್ಯದಲ್ಲಿ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣವಾಗಿದೆ. ಮಂಡ್ಯದಲ್ಲಿ 17 ಹಾಗೂ ಬೆಂಗಳೂರು ನಗರದಲ್ಲಿ 19 ಪ್ರಕರಣಗಳು ವರದಿಯಾಗಿವೆ. ಹಾಸನದಲ್ಲಿ 4, ರಾಯಚೂರಿನಲ್ಲಿ 6, ಬೆಂಗಳೂರು ನಗರದಲ್ಲಿ 19, ಕೊಪ್ಪಳದಲ್ಲಿ 3, ವಿಜಯಪುರದಲ್ಲಿ 5, ಗದಗದಲ್ಲಿ 5, ಬಳ್ಳಾರಿಯಲ್ಲಿ 1, ದಾವಣಗೆರೆಯಲ್ಲಿ 1, ಯಾದಗಿರಿಯಲ್ಲಿ 5, ಬೀದರ್ ನಲ್ಲಿ 1, ಕಲಬುರಗಿಯಲ್ಲಿ 6, ಉತ್ತರ ಕನ್ನಡದಲ್ಲಿ 8, ಮಂಡ್ಯದಲ್ಲಿ 17, ಕೊಡಗಿನಲ್ಲಿ 1,ಬೆಳಗಾವಿಯಲ್ಲಿ 2 ಪ್ರಕರಣಗಳು ವರದಿಯಾಗಿವೆ. ಉತ್ತರಕನ್ನಡದ 2 ವರ್ಷದ ಮಗು ಹಾಗೂ ಮಂಡ್ಯದ 3 ವರ್ಷದ ಹೆಣ್ಣು ಮಗುವಲ್ಲಿ ಕೂಡ ಸೋಂಕು ದೃಢಪಟ್ಟಿದೆ.ಇದರಲ್ಲಿ ಮುಂಬೈನಿಂದ ಆಗಮಿಸಿದ ಬಹುತೇಕ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ ರಾಜ್ಯದಲ್ಲಿ 38 ಜನರು ಸೋಂಕಿನಿಂದ ಮೃತಪಟ್ಟಿದ್ದು, 521 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 