ತೌಸಿಪ್ ಶರಪುದ್ದೀನ್ ಗಿರಗಾಂವಿ ನಿಧನ
ಕೊಲ್ಹಾರ 13: ಪಟ್ಟಣ ಪಂಚಾಯಿತಿ ಸದಸ್ಯ ತೌಸಿಪ್ ಶರಪುದ್ದೀನ್ ಗಿರಗಾಂವಿ ಮಂಗಳವಾರ ಸಂಜೆ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.
ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಎಂ ಪಿ ಎಸ್ ಶಾಲೆಯ ಆವರಣದಲ್ಲಿ ಕಳೆದ ಒಂದು ವಾರದಿಂದ ಕೆಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳು ಜರುಗಿದ್ದು ಅಂತಿಮ ಪಂದ್ಯ ದಲ್ಲಿ ತಂಡವು ಜಯ ಗಳಿಸಿತ್ತು ಕ್ರಿಕೇಟ್ ತಂಡದ ಆಟಗಾರರೊಂದಿಗೆ ಸಂಜೆ ಸಂಭ್ರಮಾಚರಣೆಯಲ್ಲಿದ್ದಾಗ ತೌಸಿಪ್ ಶರಪುದ್ದೀನ್ ಗಿರಗಾಂವಿಗೆ (36) ಹೃದಯಾಘಾತವಾಗಿದೆ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.