ತಾಲೂಕು ಮಟ್ಟದ ಪ್ರಗತಿ ಪರೀಶೀಲನಾ ಸಭೆ

ಯಲಬುರ್ಗಾ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಾನ್ಯ ರಾಜ್ಯ ಆಯುಕ್ತಾಲಯದ ನಿರ್ದೇಶನದಂತೆ ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ, ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ಗ್ರಾಮ ಪಂಚಾಯತಿಗಳ  ತಾಲೂಕು ಮಟ್ಟದ ಪ್ರಗತಿ ಪರೀಶೀಲನಾ ಸಭೆಯನ್ನು  ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಪಾಟೀಲ್ ಸರ್‌ರವರ ಅಧ್ಯಕ್ಷತೆಯಲ್ಲಿ  ಜರುಗಿತು.ಸಭೆಯಲ್ಲಿ ಚರ್ಚಿಸಿದ ವಿಷಯಗಳು ಮಹಾತ್ಮ ಗಾಂಧಿ ನರೇಗಾ ಯೊಜನೆ ಪ್ರಗತಿ ಪಂಚಾಯತ್ ರಾಜ್ ವಿಷಯಗಳು ಜಲಜೀವನ್ ಮಿಷನ್ ಭೌಗಿತಿಕ ಹಾಗೂ ಆರ್ಥಿಕ ಪ್ರಗತಿ ಸ್ವಚ್ಛ ಭಾರತ್ ಮಿಷನ್ ಪರಿಹಾರ್ ಆ್ಯಪ್ ನಲ್ಲಿ ಸ್ವೀಕರಿಸಲಾದ ಅರ್ಜಿಗಳು,3054್ಘ 5054 ಅನುದಾನ ಬಳಕೆ,ಅಮೃತ ಗ್ರಾಮ ಪಂಚಾಯತಿ ಪ್ರಗತಿ,ಬಾಪೂಜಿ ಸೇವಾ ಕೇಂದ್ರಗಳ ಶುಲ್ಕದ ಬಗ್ಗೆ ತಾಪಂ ಕಚೇರಿಗೆ ಸ್ವೀಕೃತವಾದ ಅರ್ಜಿಗಳು ಕುರಿತು ಗ್ರಾಮ ಪಂಚಾಯತಿ ಪಿಡಿಒರವರು, ಕಂಪ್ಯೂಟರ್ ಆಪರೇಟರ್, ಕರ ವಸೂಲಿಗಾರರಿಂದ ಮಾಹಿತಿ ಪಡೆದು ಪ್ರಗತಿ ಸಾಧಿಸಲು ಮಾನ್ಯರು ಸೂಚಿಸಿದರು.ಸಭೆಯಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಫಕೀರ​‍್ಪ ಕಟ್ಟಿಮನಿ, ಶರಣಪ್ಪ ಕೆಳಗಿನಮನಿ, ಎಂಐಎಸ್ ಸಂಯೋಜಕರು, ಐಇಸಿ ಸಂಯೋಜಕರು, ವಿಷಯ ನಿರ್ವಾಹಕರು, ಯಲಬುರ್ಗಾ ಮತ್ತು ಕುಕನೂರ ತಾಲೂಕಿನ ಪಿಡಿಒರವರು, ಡಿಇಒರವರು, ಕರವಸೂಲಿಗಾರರು ಹಾಜರಿದ್ದರು.