ಸೆ, 14 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Talent award ceremony on September 14th
ಜಮಖಂಡಿ 22: ನಗರದಲ್ಲಿ ವೀರಶೈವ ಪಂಚಮಸಾಲಿ ಸಂಘ ಹಾಗೂ ರಾಣಿ ಚೆನ್ನಮ್ಮ ಸೊಸೈಟಿಯ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ, 14 ರಂದು ಮುಂಜಾನೆ 10 ಗಂಟೆಗೆ ಮೈಗೂರ ರಸ್ತೆಯ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಪಂಚಮಸಾಲಿ ಅಧ್ಯಕ್ಷ ಪಿ,ಎನ್,ಪಾಟೀಲ ಹೇಳಿದರು.
ನಗರದ ರಾಣಿ ಚನ್ನಮ್ಮ ಸೊಸೈಟಿಯಲ್ಲಿ ವೀರಶೈವ ಪಂಚಮಸಾಲಿ ಸಮಾಜದಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಶೇಕಡಾ 85 ರಷ್ಟು ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಥಮ ಸ್ಥಾನ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 5 ಸಾವಿರ ರೂಪಾಯಿಗಳನ್ನು ನಗದು ಹಣವನ್ನು ನೀಡುವ ಜೊತೆಗೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಸೆ,6 ರ ಒಳಗಾಗಿ ಎಲ್ಲ ಮಕ್ಕಳು ತಮ್ಮ ಮೂಲ ದಾಖಲಾತಿಯಾದ ಅಂಕಪಟ್ಟಿ, ಆಧಾರ ಕಾರ್ಡ, ಪೋಟೋ ಹೀಗೆ ತಮ್ಮ ದಾಖಲಾತಿಗಳನ್ನು ಕೊಟ್ಟು ಹೆಸರು ನೊಂದಾಯಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರಭು ಜನವಾಡ, ಅಪಾಸಾಬ ಚೌಗಲಾ, ಮಾಂತೇಶ ನರಸನಗೌಡ, ಆರ್.ಎಸ್.ಬಿರಾದರ, ಬಸು ಬಳಗಾರ, ಪಂಡಿತಪ್ಪ ಜುಲ್ಪಿ, ಕಾಡು ಗಡಾದ, ಈಶ್ವರ ನ್ಯಾಮಗೌಡ, ಮ್ಯಾನೇಜರ್ ಸಂಗು ಐನಾಪೂರ, ಚಂದ್ರಶೇಖರ ಆಲೂರ ಸುದ್ದಿಗೋಷ್ಠಿಯಲ್ಲಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 