ಪರಿಸರ ಬಗ್ಗೆ ಕಾಳಜಿವಹಿಸಿ: ಡೆಂಗಿ, ಚಿಕುನ್ಗುನ್ಯಾ, ಮಲೇರಿಯಾ ಹೋಗಲಾಡಿಸಿ
Take care of the environment: Eliminate dengue, chikungunya, malaria
ಗದಗ 13: ಆರೋಗ್ಯ ಇಲಾಖೆ ಮಲೇರಿಯಾ ವಿರೋಧಿ ಮಾಸಾಚರಣೆ ಆಯೋಜಿಸಿದ ಬಗ್ಗೆ ಮೇಲ್ಕಾಣಿಸಿದ ವಿಷಯಕ್ಕೆ ಅನುಗುಣವಾಗಿ ಆಡಳಿತ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಹುಯಿಲಗೋಳ ವ್ಯಾಪ್ತಿಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಡಾಕ್ಟರ್ ಸುಜಾತ ಅವರ ಅಧ್ಯಕ್ಷತ್ಯೆಯಲ್ಲಿ ನಡೆಯಿತು.
ಸೊಳ್ಳೆಗಳಿಂದ ಮಲೇರಿಯಾ ಡೆಂಗಿ ಚಿಕುನ್ಗುನ್ಯಾ ಮೆದುಳು ಜ್ವರ ಹಾಗೂ ಆನೆಕಾಲು ರೋಗ ಮುಂತಾದ ಹಲವಾರು ಕಾಯಿಲೆ ಹರಡುತ್ತಿದ್ದು, ಸೊಳ್ಳೆ ನಿಯಂತ್ರಣ ಮಾಡಿದಲ್ಲಿ ಇಂತಹ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಸೊಳ್ಳೆ ಸಂತಾನೋತ್ಪತ್ತಿ ತಾಣ ಬಗ್ಗೆ ಜಾಗೃತಿ ವಹಿಸಿ ಸೊಳ್ಳೆ ನಿರ್ಮೂಲನೆ ಬಗ್ಗೆ ಕಾಳಜಿ ವಹಿಸಬೇಕೆಂದು ಮಂಜುನಾಥ ಜಾಲಿಹಾಳ ಆರೋಗ್ಯ ನೀರೀಕ್ಷಣಾಧಿಕಾರಿ ತಿಳಿಸಿದರು.
ಸೊಳ್ಳೆಗಳಿಂದ ಪ್ರಸಾರವಾಗುವ ರೋಗಗಳಲ್ಲಿ ಮಲೇರಿಯಾ ರೋಗವು ಕೂಡ ಒಂದು. ಇದು ಪ್ಲಾಸ್ಮೊಡಿಯಾ ಎಂಬ ಸೂಕ್ಷ್ಮಾಣು ಪರಾವಲಂಬಿ ಮೂಲಕ ಬರುತ್ತದೆ. ಹೆಣ್ಣು ಅನಾಫಿಲಿಸ್ ಸೊಳ್ಳೆಯು ಮಲೇರಿಯಾ ಸೋಂಕಿತ ವ್ಯಕ್ತಿಗೆ ಕಚ್ಚಿ ರಕ್ತ ಹೀರಿ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮಲೇರಿಯಾ ರೋಗ ಲಕ್ಷ ಣಗಳಲ್ಲಿ ಮೊದಲು ಚಳಿ ನಂತರ ವಿಪರೀತ ಜ್ವರ ಬಂದು ಕೊನೆಗೆ ಬೆವರುವಿಕೆಯಿಂದ ಆರಾಮ ಎನಿಸುತ್ತದೆ. ಇದೇ ಲಕ್ಷ ಣಗಳು ಪುನರಾವರ್ತನೆಗೊಳ್ಳುತ್ತದೆ. ಇದೇ ಅವಧಿಯಲ್ಲಿ ರಕ್ತ ಲೇಪನವನ್ನು ತೆಗೆದು ಪರೀಕ್ಷೆ ಮಾಡಿದಾಗ ಮಲೇರಿಯಾ ರೋಗವೆಂದು ಖಚಿತ ಪಡಿಸಬಹುದು. ಮಲೇರಿಯಾ ರೋಗವೆಂದು ಖಚಿತಪಟ್ಟಾಗ 14 ದಿನಗಳವರೆಗೆ ಪ್ರಮ್ಯಾಕ್ವಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಸಂಪೂರ್ಣ ಗುಣವಾಗುತ್ತದೆ. ಕಾರಣ ಸಾರ್ವಜನಿಕರು ಯಾವುದೇ ಜ್ವರ ಬಂದಾಗ ಆರೋಗ್ಯ ಸಹಾಯಕರ ಹತ್ತಿರ ಅಥವಾ ಆಶಾ ಕಾರ್ಯಕರ್ತೆಯರಲ್ಲಿ ರಕ್ತಲೇಪನ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಹುಯಿುಗೋಳ ಆರೋಗ್ಯ ನೀರೀಕ್ಷಣಾಧಿಕಾರಿ ಶ್ರೀ ನಾಗರಾಜ ಜೋಷಿ ಮಾತನಾಡಿ, ಮಲೇರಿಯಾ ರೋಗವನ್ನು ಸಂಪೂರ್ಣ ನಿಯಂತ್ರಿಸುವಲ್ಲಿ 2025 ರೊಳಗೆ ಮಲೇರಿಯಾ ನಿರ್ಮೂಲನೆಗೆ ಪಣ ತೊಡೊಣ, ಮಲೇರಿಯಾ ಮುಕ್ತ ಸಮಾಜ ನಿರ್ಮಿಸೋಣ ಮತ್ತು ಒಳಿತಿಗಾಗಿ ಮಲೇರಿಯಾ ಕೊನೆಗೊಳಿಸೋಣ ಎಂಬ ಈ ಸಾಲಿನ ಘೋಷಣೆ ಹೇಳುತ್ತಾ ಮನೆ ಸುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಮನೆಯಲ್ಲಿ ಮತ್ತು ಮನೆ ಸುತ್ತಮುತ್ತ ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಸೊಳ್ಳೆಗಳ ಸಂತತಿ ಕಡಿಮೆ ಮಾಡಲು ಪರಿಸರದಲ್ಲಿ ಹಾಗೂ ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಯಂ ರಕ್ಷ ಣಾ ವಿಧಾನಗಳಾದ ಸೊಳ್ಳೆ ಪರದೆ, ಬೇವಿನ ಸೊಪ್ಪಿನ ಹೊಗೆ, ಸೊಳ್ಳೆ ಬತ್ತಿ ಹಾಗೂ ಸೊಳ್ಳೆ ಬ್ಯಾಟ್ ಮುಖಾಂತರ ಸೊಳ್ಳೆಗಳನ್ನು ನಿಯಂತ್ರಿಸಬಹುದೆಂದರು. ಡಿಡಿಟಿ ಸಿಂಪರಣೆ ಮಾಡಲು ಬಂದಾಗ ಮನೆಯ ಒಳಗೆ ಸಿಂಪರಣೆ ಮಾಡಿಸಬೇಕು ಎಂದು ತಿಳಿಸಿದರು. ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಆರ್ಡಿಟಿ. ಮೂಲಕ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶೀಲಾ ಮಳೇಕರ್ ಸವಿತಾ ಪವಾರ್ ಆಶಾ ಕಾರ್ಯಕರ್ತರಾದ ಪಕೀರವ್ವ ಕಡಿಯವರ್ ರೇಷ್ಮಾ ನದಾಫ ಗಂಗವ್ವ ದೇವಶೆಟ್ಟಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 