ತಹಶೀಲ್ದಾರ ಕಚೇರಿಯ ರೆಕಾರ್ಡ್ರೂಮ್ ದಾಖಲೆಗಳು ಈಗ ಸಂಪೂರ್ಣ ಡಿಜಿಟಲೀರಣ

ತಹಶೀಲ್ದಾರ ಕಚೇರಿಯ ರೆಕಾರ್ಡ್ರೂಮ್ ದಾಖಲೆಗಳು ಈಗ ಸಂಪೂರ್ಣ ಡಿಜಿಟಲೀರಣ  Tahsildar's office record room records are now completely digitized

ಲೋಕದರ್ಶನ ವರದಿ 

 ಮುಂಡಗೋಡ 21 :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಭೂಸುರಕ್ಷಾ” ಯೋಜನೆಯಡಿ ಮುಂಡಗೋಡ  ತಹಶೀಲ್ದಾರ ಕಚೇರಿಯ  ರೆಕಾರ್ಡ್‌ ರೂಮ್ ದಾಖಲೆಗಳನ್ನು  ಈಗ ಸಂಪೂರ್ಣವಾಗಿ ಡಿಜಿಟಲೀರಣಗೊಳಿಸಲಾಗಿದೆ. ಹಳೆಯ ಕಡತಗಳನ್ನು; ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸಂಕ್ಷಿಸುವ ಮೂಲಕ ದಾಖಲೆಗಳ ಸುರಕ್ಷತೆಯನ್ನು; ಖಚಿತಪಡಿಸುವುದ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಪೋರ್ಟಲ್ ಮೂಲಕ ನೇರವಾಗಿ ದಾಖಲೆಗಳನ್ನು ವಿತರಿಸುವುದರಿಂದ ಸಾರ್ವಜನಿಕರು ಕಚೇರಿಗಳಿಗೆ ಪದೇ ಪದೇ ಭೇಟಿ ನೀಡಿ ಸಾಲಿನಲ್ಲಿ ನಿಲ್ಲುವ ಅವಶ್ಕತೆಯಿಲ್ಲದೆ ಸಮಯ ಉಳಿತಾಯ ಮಾಡಲು ಯೋಜನೆ ಸಹಕಾರಿಯಾಗಿದೆ. ಅಲ್ಲದೆ ಮುಂಡಗೋಡ ತಹಶೀಲ್ದಾರ ಕಚೇರಿಯ ಎ.ಜೆಎಸ್‌.ಕೆ. ಕೇಂದ್ರ ಮತ್ತು ಪಾಳಾ ಹೋಬಳಿಯ  ನಾಡಕಚೇರಿಯಲ್ಲಿಯೂ ಸಹ ಈ ಸೌಲಭ್ಯ ಇದ್ದು ನಾಗರಿಕರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ. ದಾಖಲೆಗಳು ಪಡೆಯುವ ಹಂತಗಳು:ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಪೋರ್ಟಲ್ಗೆ ಲಾಗಿನ್ ಆಗಿ.  ಅರ್ಜಿದಾರರ ಮಾಹಿತಿ ಮತ್ತು ಬೇಕಾದ ಕಡತದ ವಿವರಗಳನ್ನು ನಮೂದಿಸಿ. ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ ಅಗತ್ಯವಿರುವ ದಾಖಲೆಗಳಯನ್ನು; ಹುಡುಕಿ, ಅಗತ್ಯವಿರುವ ಪುಟಗಳನ್ನು ಆಯ್ದಕೊಂಡು ಆನ್ಲೈನ್ ನಲ್ಲಿ ಅತ್ಯಲ್ಪ ಶುಲ್ಕ ಪಾವತಿಸಿ. ಪಾವತಿಯ ನಂತರ ನಿಮ್ಮ ಅಧಿಕೃತ ದಾಖಲೆಯನ್ನು ತಕ್ಷಣವೇ  ಡೌನ್ಲೋಡ್ ಮಾಡಿಕೊಳ್ಳಿ.