ವ್ಯೆದ್ಯಾಕೀಯ ವಿಭಾಗದಲ್ಲಿ ಸೂಷ್ಮಗೆ ಚಿನ್ನದ ಪದಕ
ಲೋಕದರ್ಶನ ವರದಿ
ಹೂವಿನಹಡಗಲಿ 12: ತಾಲೂಕಿನ ಹೊಳಗುಂದಿ ಗ್ರಾಮದ ಸೂಷ್ಮ ಹಾವನೂರು ಈಚೆಗೆ ಆಂದ್ರ್ರದೇಶದ ಡಾ.ಎನ್.ಟಿ.ಆರ್.ಆರೋಗ್ಯ ವಿಶ್ವವಿದ್ಯಾಲಯ ವಿಜಯವಾಡದಲ್ಲಿ ನಡೆದ ಬಿ.ಹೆಚ್.ಎಂ.ಎಸ್. ಪರೀಕ್ಷೆ ಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ.ಗ್ರಾಮೀಣ ಪ್ರತಿಭೆ ಉಪನ್ಯಾಸಕ ಹಾವನೂರು ಚಂದ್ರ್ಪ ಮತ್ತು ಶಿಕ್ಷಕಿ ಕಿನ್ನರಿ ದೇವಿ ಅವರ ಪುತ್ರಿ ಸೂಷ್ಮ ಅವರು ನಿರಂತರ ಓದುವ ಅಭ್ಯಾಸದಿಂದ ವ್ಯೆದ್ಯಾಕೀಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ .ಎಂಡೋ ಮೆಂಟ್ ಫಂಡ್ ಸಂಸ್ಥೆಯಿಂದ ರಾಜ್ಯ ಪಾಲರು ಮತ್ತು ವ್ಯೆಸ್ ಚಾನ್ಸೆಲರ್ ಅವರು ಜೂನ್ 2. ರಂದು ವಿಜಯವಾಡದ ವಿವಿಯಲ್ಲಿ ಹಾವನೂರು ಸೂಷ್ಮಗೆ ಬಹುಮಾನವನ್ನು ವಿತರಿಸಿದ್ದಾರೆ. ಪ್ರೌಢಶಾಲೆ ಎಸ್.ಎಸ್.ಎಲ್.ಸಿ.ಯಲ್ಲಿ ನೂರರಷ್ಟು ಪಡೆದರೆ ಪಿಯುಸಿ ಯಲ್ಲಿ ಶೇ. 99ರಷ್ಟು ಫಲಿತಾಂಶ ಪಡೆದಿದ್ದಾರೆ . ಇದೀಗ ಬಿ.ಹೆಚ್.ಎಂ.ಎಸ್. ವ್ಯೆದ್ಯಾಕೀಯ ವಿಭಾಗದಲ್ಲಿ ಎರಡು ಬಹುಮಾನವನ್ನು ಪಡೆದು ಕೀರ್ತಿ ತಂದಿದ್ದಾರೆ . ಅದೇ ರೀತಿ ಮಗ ಡಾ.ಅರುಣ್ ಹಾವನೂರು ಅವರು ಎಂ.ಬಿ.ಬಿ.ಎಸ್.ಎಂ.ಡಿ ಪಾಂಡಿಚೇರಿ ಯಲ್ಲಿ ಮಕ್ಕಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ ಇವರು ಸಹ ಅದ್ಬುತ ಸಾಧನೆ ಮಾಡಿದ್ದಾರೆ.