ಅಮ್ಜದ್ ಪಟೇಲ್ ಅವರ ಸಮೀಕ್ಷೆ ಮಾಡಿದ ಶಿಕ್ಷಕ ಹ್ಯಾಟಿ
Survey: Koppal
ಕೊಪ್ಪಳ 30 : ಕರ್ನಾಟಕ ಸರ್ಕಾರ ಕೈಗೊಂಡಿರುವ ಜನರ ಆರ್ಥಿಕ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯ ಭರದಿಂದ ಸಾಗಿದ್ದು ಮಂಗಳವಾರ ಬೆಳಿಗ್ಗೆ ಕೊಪ್ಪಳ ನಗರದ ಮೂರನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಹಮಾಲರ ಕಾಲೋನಿಯಲ್ಲಿರುವ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರ ನಿವಾಸಕ್ಕೆ ಕುಟುಂಬದ ಸಮೀಕ್ಷೆ ಮಾಡಲು ಆಗಮಿಸಿದ ಶಿಕ್ಷಕ ಮಲ್ಲಿಕಾರ್ಜುನ್ ಹ್ಯಾಟಿ ಯವರಿಗೆ ಮನೆಯ ಮುಖ್ಯಸ್ಥರಾಗಿರುವ ಅಮ್ಜದ್ ಪಟೇಲ ರವರು ತಮ್ಮ ಕುಟುಂಬದ ಸಂಪೂರ್ಣ ಮಾಹಿತಿ ನೀಡಿದರು.
ಸಮೀಕ್ಷೆ ನಡೆಸಿದ ಶಿಕ್ಷಕ ಮಲ್ಲಿಕಾರ್ಜುನ್ ಹ್ಯಾಟಿ ಅವರು ಬಹಳ ವಿಸ್ತಾರವಾಗಿ ನಿಗದಿತ ಫಾರಂ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಒಂದೊಂದಾಗಿ ಕೇಳಿ ಭರ್ತಿ ಮಾಡಿಕೊಂಡು ತೆರಳಿದರು, ಮನೆಮನೆಗೆ ಭೇಟಿ ನೀಡಿ ತಮಗೆ ನೀಡಿರುವ ಜವಾಬ್ದಾರಿ ನಿಭಾಯಿಸಲು ಮತ್ತು ಎಲ್ಲಾ ಕಾರ್ಯ ಸಂಪೂರ್ಣವಾಗಿ ನೆರವೇರಿಸಲು ಪ್ರತಿದಿನ ರಾತ್ರಿ ಸುಮಾರು 9 ಗಂಟೆ ವರೆಗೆ ಸಮೀಕ್ಷಾ ಕಾರ್ಯ ನಡೆಸುತ್ತಿದ್ದಾರೆ ಸದರಿ ಯವರ ಜವಾಬ್ದಾರಿಯುತ ಉತ್ತಮ ಕಾರ್ಯಕ್ಕೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರು ಅಭಿನಂದಿಸಿ ನಗರದ ಸಾರ್ವಜನಿಕರು ತಮ್ಮ ತಮ್ಮ ಮನೆಗೆ ಸಮೀಕ್ಷೆಗೆ ಬಂದ ಶಿಕ್ಷಕರಿಗೆ ಎಲ್ಲಾ ಮಾಹಿತಿಗಳನ್ನು ನೀಡಿ ಸರ್ಕಾರದ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿಕೊಂಡರು,
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 