ಸಿಎನ್ಜಿ ಬದಲು ಸಿಬಿಜಿ ಗ್ಯಾಸ್ ಪೂರೈಕೆ: ಆಟೋ ಚಾಲಕರ ವಿರೋಧ
Supply of CBG instead of CNG: Auto drivers oppose the move
ಲಕ್ಷ್ಮೇಶ್ವರ, ಆ.25: ಪಟ್ಟಣದ ಮಾನವಿ ಪೆಟ್ರೋಲ್ ಬಂಕ್ನಲ್ಲಿ ಪೂರೈಕೆಯಾಗುತ್ತಿದ್ದ ಸಿಎನ್ಜಿ ಸಿಲಿಂಡರ್ ಗ್ಯಾಸ್ ಬದಲಿಗೆ ಸಿಬಿಜಿ ಗ್ಯಾಸ್ ಪೂರೈಸಲು ಬಂದಿದ್ದ ವಾಹನವನ್ನು ಆಟೋ ಚಾಲಕರು ಹಾಗೂ ಮಾಲೀಕರು ತಡೆದು ಪ್ರತಿಭಟನೆ ನಡೆಸಿದರು.
ಆಟೋ ಚಾಲಕರು ಮಾತನಾಡಿ, ಪ್ರತಿದಿನ ತಮ್ಮ ಆಟೋಗಳಿಗೆ ಸಿಎನ್ಜಿ ಸಿಲಿಂಡರ್ ಗ್ಯಾಸ್ ಬಳಸುತ್ತಿದ್ದು, ಇದೀಗ ಏಕಾಏಕಿ ಸಿಬಿಜಿ ಗ್ಯಾಸ್ ಪೂರೈಕೆ ಮಾಡಲು ಮುಂದಾಗಿರುವುದಕ್ಕೆ ವಿರೋಧವಿದೆ ಎಂದು ಹೇಳಿದರು.
ಸಿಬಿಜಿ ಗ್ಯಾಸ್ ಬಳಸುವುದರಿಂದ ವಾಹನಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಹಾಗೂ ವಾಹನಗಳು ಪದೇಪದೇ ಕೆಟ್ಟುಹೋಗುವ ಆತಂಕವಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಆದ್ದರಿಂದ ಸಿಎನ್ಜಿ ಸಿಲಿಂಡರ್ ಗ್ಯಾಸ್ನ್ನೇ ಪೂರೈಸಬೇಕು ಎಂದು ಬಂಕ್ ಮಾಲೀಕರನ್ನು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಬಂಕ್ ಮಾಲೀಕ ವೀರೇಶ ಮಾನವಿ, ಸಿಎನ್ಜಿ ಗ್ಯಾಸ್ ಪೂರೈಕೆ ಮಾಡುವಂತೆ ಈಗಾಗಲೇ ಕಂಪನಿಗೆ ತಿಳಿಸಲಾಗಿದೆ. ಆದರೆ ಕಂಪನಿಯವರು ಸಿಎನ್ಜಿ ಬದಲಿಗೆ ಸಿಬಿಜಿ ಗ್ಯಾಸ್ ಕಳುಹಿಸಿದ್ದಾರೆ. ಅದನ್ನು ವಾಪಸ್ ಕಳುಹಿಸುವುದಾಗಿ ಭರವಸೆ ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 