ಬಟ್ಟೆ ಅಂಗಡಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಬಟ್ಟೆ ಬೆಂಕಿಗಾಹುತಿ
ಕೊಳ್ಳೇಗಾಲ, ಜೂ.7 ಬಟ್ಟೆ ಅಂಗಡಿಯೊಂದರಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು ಭಸ್ಮವಾಗಿರುವ ಘಟನೆ ಇಲ್ಲಿನ ಜಯ್ ಇನ್ಸ್ಟ್ಯೂಟ್ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.ದಕ್ಷಿಣ ಬಡವಾಣೆಯ ಜಯ್ ಇನ್ಸ್ಟ್ಯೂಟ್ ರಸ್ತೆಯಲ್ಲಿನ ಮೀನಾಕ್ಷಿ ಟೆಕ್ಸ್ಟೆಲ್ಸ್ ನಲ್ಲಿ ರಾತ್ರಿ ಸುಮಾರು 9.45ರ ವೇಳೆ ಅಂಗಡಿ ಮಾಲೀಕ ಪುನಮ್ ಸಿಂಗ್ ವ್ಯಾಪಾರ ಮುಗಿಸಿ, ಅಂಗಡಿ ಬಂದ್ ಮಾಡುವ ವೇಳೆ ಒಳಗಡೆಯಿಂದ ಭಾರಿ ಶಬ್ಧದೊಂದಿಗೆ, ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.ಅಂಗಡಿ ಬಂದ್ ಮಾಡುವ ವೇಳೆ ಬಾಗಿಲು ಸಿಡಿದು ಬೆಂಕಿ ಕೆನ್ನಾಲಿಗೆ ಹೊರಗೆ ಬಂದ ಪರಿಣಾಮ ಅಂಗಡಿ ಮಾಲೀಕ ಪುನಮ್ ಸಿಂಗ್ ತೆಲೆಗೆ ಪೆಟ್ಟಾಗಿದ್ದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂತರ ಸ್ಥಳಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಹೊತ್ತಿ ಹುರಿಯುತ್ತಿದ ಬೆಂಕಿ ನಂದಿಸಿದ್ದು. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಆದರೆ ಆಕಸ್ಮಿಕ ಬೆಂಕಿ ಹೊತ್ತಲು ವಿದ್ಯುತ್ ಶಾರ್ಕ್ ಸರ್ಕ್ಯೂಟ್ ಕಾರಣವೋ ? ಅಥವಾ ಬೇರೆ ಕಾರಣ ಇರಬಹುದೋ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 