ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಸುಧಾಕರ ದೈವಜ್ಞ
Students should occupy high positions: Sudhakar Daivajna
ಶಿಗ್ಗಾಂವಿ, ಸೆ. 6: ಸಮಾಜದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ದೈವಜ್ಞ ಸಮಾಜ ತಾಲೂಕು ಅಧ್ಯಕ್ಷ ಸುಧಾಕರ ದೈವಜ್ಞ ಹೇಳಿದರು.
ಪಟ್ಟಣದ ವಿಠ್ಠಲ ದೇವಸ್ಥಾನದಲ್ಲಿ ದೈವಜ್ಞ ಸಮಾಜದ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಸಮಾಜದವರು ಇಂದು ಮುಖ್ಯವಾಹಿನಿಗೆ ಬಂದಿದ್ದಾರೆ. ಅದೇ ರೀತಿ ದೈವಜ್ಞ ಸಮಾಜದವರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಮಾಜಿ ಅಧ್ಯಕ್ಷ ಪ್ರಕಾಶ ವೇರ್ಣೇಕರ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಸಂಘಟನೆ ಪ್ರಮುಖ ಪಾತ್ರ ವಹಿಸುತ್ತದೆ. ಸಂಘಟನೆಯ ಮೂಲಕ ಸಮಾಜದ ವಿವಿಧ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಾದ ಗೌರಿ ಎ. ವೇರ್ಣೇಕರ, ಸ್ಪಂದನಾ ಎಂ. ವೇರ್ಣೇಕರ, ರೀತಿ ಆರ್. ರಾಯ್ಕರ್, ರಂಜಿತಾ ಎಂ. ವೇರ್ಣೇಕರ ಹಾಗೂ ಸಂಧ್ಯಾ ಎನ್. ರಾಯ್ಕರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭೂದಾನಿ ವಾಸುದೇವ ರಾಯ್ಕರ್, ಚಂದ್ರಕಾಂತ ಪಾಲನಕರ, ದತ್ತಣ್ಣ ವೇರ್ಣೇಕರ, ವಿನಾಯಕ ರಾಯ್ಕರ್, ಮೋಹನ ರಾಯ್ಕರ್, ಪ್ರಕಾಶ ಪಾಲನಕರ, ರಾಮಕೃಷ್ಣ ರಾಯ್ಕರ್, ಸಂಕೇತ ರಾಯ್ಕರ್, ಮಂಜುನಾಥ ವೇರ್ಣೇಕರ, ಆನಂದ ವೇರ್ಣೇಕರ, ಜಗದೀಶ ಶೇಜವಾಡಕರ, ನಾಗೇಶ ರಾಯ್ಕರ್, ಸಂತೋಷ ರಾಯ್ಕರ್, ನಾಗರಾಜ ರಾಯ್ಕರ್, ವಿನೋದಾ ಕುಡೇಕರ, ಭೂಷಣ ರೇವಣಕರ, ರಾಘವೇಂದ್ರ ದೈವಜ್ಞ, ಗಣೇಶ ಕುಡತರಕರ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 