ಯೋಜನೆ ಪ್ರಗತಿಗಾಗಿ ಶಕ್ತಿ ಮೀರಿ ಪ್ರಯತ್ನಿಸಿ: ಇಓ ಚಲವಾದಿ
Strive your utmost for the progress of the project: EO Chalavadi
ತಾಳಿಕೋಟಿ: ವಿಕಸಿತ ಭಾರತ-ಗ್ಯಾರಂಟಿ ಆ್ಯಂಡ್ ಆಜವೀಕ ಮಿಷನ್ (ಗ್ರಾಮೀಣ) ಯೋಜನೆಯ ಅರ್ಹ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸಿ ನಿಗದಿತ ಮಾನವ ದಿನಗಳ ಸೃಜನೆಯಲ್ಲಿ ಪ್ರಗತಿ ಸಾಧಿಸುವಂತೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅನುಸೂಯಾ ಚಲವಾದಿ ಅವರು ಪಿಡಿಒ ಅವರಿಗೆ ಸೂಚಿಸಿದರು.ತಾಲೂಕಿನ ಕಲಕೇರಿ, ಬೆಕಿನಾಳ, ಅಸ್ಕಿ , ಕೊಡಗಾನೂರ ಹಾಗೂ ಮೂಕಿಹಾಳ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ವಿಬಿ-ಜಿ ರಾಮ್-ಜಿ ಯೋಜನೆಯ ಪ್ರಗತಿ, ವಿವಿಧ ಕಾಮಗಾರಿಗಳು ಹಾಗೂ ಕಾರ್ಮಿಕರ ಹಾಜರಾತಿಯನ್ನು ಪರೀಶೀಲಿಸಿದರು.ಸಹಾಯಕ ನಿರ್ದೇಶಕ (ಗ್ರಾ.ಉ.) ಪಿ.ಎಸ್.ಕಸನಕ್ಕಿ ಮಾತನಾಡಿ, ಯೋಜನೆಯ ಕುರಿತು ಗ್ರಾಮೀಣ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಹೇಳಿ, ಹೆಚ್ಚು ಜನರನ್ನು ಕೆಲಸಕ್ಕೆ ಕರೆ ತರಲು ತಿಳಿಸಿದರು.
ಉದ್ಯೋಗ ಚೀಟಿ ಇಲ್ಲದೆ ಕೂಲಿಕಾರರಿಗೆ ಹೊಸ ಉದ್ಯೋಗ ಚೀಟಿ ಮಾಡುವುದು, ವಿತರಣ ಮೇಳ ಹಮ್ಮಿಕೊಳ್ಳುವಂತೆ ತಿಳಿಸಿದರು.ಜಿ.ಪಂ. ಎಡಿಪಿಸಿ ಪೃಥ್ವಿರಾಜ್ ಪಾಟೀಲ ಅವರು, ಕಾಮಗಾರಿ ಸ್ಥಳದಲ್ಲಿ ಎನ್ ಎಂ ಎಂ ಎಸ್ ಹಾಜರಾತಿ ಪರೀಶೀಲಿಸಿ, ಅಳತೆಗೆ ತಕ್ಕಂತೆ ಕೆಲಸ ನಿರ್ವಹಿಸಿ ಸಮಾನ ಕೂಲಿ ಪಡೆಯರಿ ಎಂದು ತಿಳಿಸಿ, ಕಾಯಕ ಮಿತ್ರ ಅವರಿಗೆ ಹಾಗೂ ಐಇಸಿ ಸಂಯೋಜಕರಿಗೆ ಹೆಚ್ಚು ಜನರನ್ನು ಕೆಲಸಕ್ಕೆ ಕರೆ ತರಲು ಪ್ರತಿ ಪಂಚಾಯತಿಯಲ್ಲಿ ಮನೆ-ಮನೆ ಭೇಟಿ ನೀಡಿ ಯೋಜನೆಯ ಮಾಹಿತಿ ನೀಡಲು ಹೇಳಿದರು.ಕಲಕೇರಿ ಪಿಡಿಓ ಬಸನಗೌಡ ಚೌದ್ರಿ, ಬೆಕಿನಾಳ ಮತ್ತು ಅಸ್ಕಿ ಪಿಡಿಓ ಪ್ರಕಾಶ ಅಂಜುಟಗಿ, ಕೊಡಗಾನೂರ ಪಿಡಿಓ ಆಯ್.ಡಿ ಬಡಿಗೇರ, ಮೂಕಿಹಾಳ ಕಾರ್ಯದರ್ಶಿ ಎಸ್.ಎಮ್ ಬಿರಾದಾರ ಹಾಗೂ ತಾಂತ್ರಿಕ ಸಹಾಯಕ ಅನ್ನಾನ ಅಹಮ್ಮದ್, ಕಾಯಕಮಿತ್ರರು, ಕಾಯಕ ಬಂಧುಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 