ಬಿರುಗಾಳಿ-ಮಳೆ ಧಾವ ಹಿ 18 ಮನೆಗಳು ನೆಲಕಚ್ಚಿ ಭಾರಿ ಹಾನಿ
Storm-rainstorm causes major damage, 18 houses razed to the ground
ಲೋಕದರ್ಶನ ವರದಿ
ಸಂಬರಗಿ 15: ಗಡಿಭಾಗದ ಗ್ರಾಮಗಳಲ್ಲಿ ಬುಧವಾರ ಸಾಯಂಕಾಲ ಬಿರುಗಾಳಿ ಮಳೆಯಿಂದ ಭಾರಿ ಹಾನಿಯಾಗಿದ್ದು, ಸಂಬರಗಿ ಗ್ರಾಮಕ್ಕೆ ತಹಶೀಲ್ದಾರ ಸಿದರಾಯ ಭೋಸಗಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ ಹಾಗೂ ಗ್ರಾಮದ ಅಭಿವೃದ್ಧಿ ಅಧಿಕಾರಿ ಧರೆಪ್ಪ ತಗಲಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ಮಾಡಿದರು. ಹಾನಿಯಾಗಿರುವ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದರು. ಸಂಬರಗಿ, ಶಿರೂರ, ಅನಂತಪೂರ, ಜಂಬಗಿ, ಅರಳಿಹಟ್ಟಿ, ಮದಭಾವಿ, ಜಕ್ಕಾರಟ್ಟಿ ಸೇರಿದ ಗ್ರಾಮಗಳಲ್ಲಿ ಭಾರಿ ಬಿರುಗಾಳಿ ಮಳೆಯಿಂದ ಹಾನಿಯಾಗಿದೆ. ರಸ್ತೆ ಬದಿಗೆ ಮರಗಳು ನೆಲಕ್ಕಚ್ಚಿವೆ. ತೋಟಪಟ್ಟಿ ವಸತಿಗಳಲ್ಲಿ ಭಾರಿ ಹಾನಿಯಾಗಿದೆ.
ಮನೆಯ ಪತ್ರಾಸ್ಗಳು ಹಾಗೂ ಸಂಬರಗಿ ಗ್ರಾಮದ ಬೀದಿ ದೀಪಗಳು ನೆಲಕ್ಕಚ್ಚಿವೆ. ಕಳೆದ 2 ದಿನದಿಂದ ಗಡಿಭಾಗದ ಗ್ರಾಮಗಳು ಕತ್ತಲೆಯಲ್ಲಿದ್ದಾವೆ. ತೋಟಪಟ್ಟಿ ವಸತಿಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ರೈತರಿಗೆ ಬಿರುಗಾಳಿ ಮಳೆಯಿಂದ ಭಯವಯ ವಾತಾವರಣ ನಿರ್ಮಾಣಗೊಂಡಿದೆ. ಸಂಬರಗಿ ಗ್ರಾಮದಲ್ಲಿ ಒಟ್ಟು 18 ಮನೆಗಳು ನೆಲಕಚ್ಚಿದ್ದಾವೆ. ಅವರಿಗೆ ಸರಕಾರದಿಂದ ಮನೆ ಮಂಜೂರಾತಿ ಮಾಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ. ಈ ಕುರಿತು ತಹಶೀಲ್ದಾರ ಸಿದರಾಯ ಭೋಸಗಿ ಇವರನ್ನು ಸಂಪರ್ಕಿಸಿದಾಗ, ಬಿರುಗಾಳಿ-ಮಳೆಯಿಂದ ಆಗಿರುವ ಹಾನಿಯನ್ನು ಪರೀಕ್ಷೆ ಮಾಡಲು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿ, ಜಿಲ್ಲಾ ಪಂಚಾಯತ ಅಭಿಯಂತರರು ಇವರ ಸಂಯುಕ್ತದಿಂದ ಪರೀಶೀಲನೆ ಮಾಡಲಾಗುವುದು ಎಂದು ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 