ಕಾರವಾರ

ರಾಜ್ಯ ಮಟ್ಟಕ್ಕೆ ಆಯ್ಕೆ

ರಾಜ್ಯ ಮಟ್ಟಕ್ಕೆ ಆಯ್ಕೆ

ಕಾರವಾರ 05:- ಪ್ರಸುತ್ತ ಸಾಲಿನ ಜಿಲ್ಲಾ ಮಟ್ಟದ 17 ವಯೋಮಾನದ ಪ್ರೌಢ ಶಾಲೆಗಳ ವೈಯಕ್ತಿಕ ಆಟಗಳ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟವು ಮಂಗಳವಾರ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು.  

ಸದರಿ ಕ್ರೀಡಾಕೂಟದಲ್ಲಿ ಗೋಕರ್ಣದ ಗಂಗೆಕೊಳ್ಳ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಯ ವಿದ್ಯಾರ್ಥಿನಿ ಅಲ್ಪೊನ್ಸಾ ಅನೀಲ ಗರಿಬಾಚೆ ಇವಳು ಅಥ್ಲೆಟಿಕ್ ಬಾಲಕಿಯರ ವಿಭಾಗದಲ್ಲಿ ಚಕ್ರ ಎಸೆತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಶಾಲಾ ಕೀರ್ತಿಯನ್ನು ಹೆಚ್ಚಿಸಿರುತ್ತಾಳೆ. ಇವಳಿಗೆ ತರಬೇತಿಯನ್ನು  ದೈಹಿಕ ಶಿಕ್ಷಕಿ ಶಾರದಾ ಗೌಡ ರವರು ನೀಡಿರುತ್ತಾರೆ. 

ವಿದ್ಯಾರ್ಥಿನಿಯರ ಯಶಸ್ಸಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಮೇಶ. ವೈ.ಕೆ. ವಸತಿ ಶಾಲೆ ಪ್ರಾಂಶುಪಾಲ ಎನ್‌.ಆರ್‌.ನಾಯಕ, ಶಿಕ್ಷಕ -ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ