ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಕ್ಕೆ ಗುಮ್ಮಟನಗರಿಯಲ್ಲಿ ವಿದ್ಯುಕ್ತ ತೆ
State-level badminton match gets underway in Gummatanagari
ಲೋಕದರ್ಶನ ವರದಿ
ವಿಜಯಪುರ ಮೇ 23: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಮೇ 17 ರಿಂದ 7 ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಸಬ್ ಜೂನಿಯರ್ ರಾ್ಯಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ 2026 ಪಂದ್ಯಾವಳಿಗೆ ಶನಿವಾರ ವಿದ್ಯುಕ್ತವಾಗಿ ತೆರೆಬಿತ್ತು. ಇದೇ ಮೊದಲ ಬಾರಿಗೆ ನಡೆದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟ ಗುಮ್ಮಟ ನಗರಿಯ ಜನತೆಯನ್ನು ಕಳೆದ 7 ದಿನಗಳಿಂದ ಬ್ಯಾಡ್ಮಿಂಟನ್ ಲೋಕದಲ್ಲಿ ಮಿಂದೇಳಿಸಿತು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಅಧಿಕೃತ ಮಾನ್ಯತೆಯೊಂದಿಗೆ ಯೊನೆಕ್ಸ್ ಸನ್ ರೈಸ್ ಪ್ರಾಯೋಕತ್ವದಡಿ ನಗರದ ಬಿಎಲ್ ಡಿ ಸಂಸ್ಥೆ ಹಾಗೂ ಜಿಲ್ಲಾಡಳಿತದ ಸಹಕಾರದಲ್ಲಿ ಈ ಪಂದ್ಯಾಟ ನಡೆದಿದ್ದರಿಂದ ಯಶಸ್ವಿಯಾಗುವುದರ ಮೂಲಕ ಜಿಲ್ಲೆಯ ಇತಿಹಾಸ ಪುಟಗಳಲ್ಲಿ ದಾಖಲೆಯನ್ನು ಬರೆಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಹಾಗೂ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಬ್ಯಾಡ್ಮಿಂಟನ್ ಆಟ ಪ್ರಸಿದ್ಧಿ ಪಡೆದು ಯುವಕರು ಪ್ರೇರಣೆ ಹೊಂದುವಂತಾಗಲಿ ಎಂಬ ಸದಾಶಯದಂತೆ ಜಿಲ್ಲೆ ಆ ನಿಟ್ಟಿನಲ್ಲೂ ಆಯೋಜಿಸುವ ಕ್ರೀಡೆಗಳಿಗೆ ಆತಿಥ್ಯ ವಹಿಸಿಕೊಂಡು ಬ್ಯಾಡ್ಮಿಂಟನ್ ಆಟದತ್ತ ರಾಜ್ಯ ಹಾಗು ಜಿಲ್ಲೆಯ ಜನತೆಯ ಗಮನಸೆಳೆಯಿತು.
ನಗರದ ಡಾ.ಬಿ. ಆರ್. ಅಂಬೇಡ್ಕರ್ ಒಳಾಂಗಣ ಹಾಗೂ ಬಿಎಲ್ಡಿಇ ಸಂಸ್ಥೆಯ ಒಳಾಂಗಣದಲ್ಲಿ ನಡೆದ ಬ್ಯಾಡ್ಮಿಂಟನ್ ಆಟಗಳು ನಗರದ ಬ್ಯಾಡ್ಮಿಂಟನ್ ಪ್ರೇಮಿಗಳನ್ನು ಬ್ಯಾಡ್ಮಿಂಟನ್ ಆಟದತ್ತ ಪ್ರೇರೆಪಿಸಿತು.ಬ್ಯಾಡ್ಮಿಂಟನ್ ಟೂರ್ನಮೆಂಟ್ 2026 ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇಲ್ಲಿನ ಜನತೆ ನೀಡಿದ ಆತಿಥ್ಯ ನಮಗೆ ಸಂಪೂರ್ಣ ಸಂತೋಷವಾಗಿದೆ ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ಬ್ಯಾಡ್ಮಿಂಟನ್ ಆಟಗಾರರು ತಿಳಿಸಿದರು.ಮಾತ್ರವಲ್ಲ, ಈ ಟೂರ್ನಮೆಂಟ್ ಆಟಗಾರರು, ಅಧಿಕಾರಿಗಳು ಹಾಗೂ ಬ್ಯಾಡ್ಮಿಂಟನ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬಂತು ಎಂದು ಸಂತಸ ಹಂಚಿಕೊಂಡರು. ಕಳೆದ 7 ದಿನಗಳಲ್ಲಿ ಸುಮಾರು 760 ಆಟಗಾರರ ಎಂಟ್ರಿಗಳು ದಾಖಲಾಗಿದ್ದು, 750ಕ್ಕೂ ಹೆಚ್ಚು ಪಂದ್ಯಗಳು ಯಶಸ್ವಿಯಾಗಿ ನಡೆದಿವೆ.ಟೂರ್ನಮೆಂಟ್ ಅವಧಿಯಲ್ಲಿ ಸುಮಾರು 200 ಶಟಲ್ ಬಾಕ್ಸ್ಗಳು (2400ಕ್ಕೂ ಹೆಚ್ಚು ಶಟಲ್ಗಳು) ಬಳಸಲ್ಪಟ್ಟಿದ್ದು, ಸ್ಪರ್ಧೆಯ ವ್ಯಾಪ್ತಿ ಮತ್ತು ಮಟ್ಟವನ್ನು ತೋರಿಸುತ್ತದೆ.
ಈ ಪಂದ್ಯಾವಳಿಯನ್ನು 3000ಕ್ಕೂ ಹೆಚ್ಚು ಸದಸ್ಯರು ಹಾಗೂ ಪ್ರೇಕ್ಷಕರು ವೀಕ್ಷಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.ಈ ಟೂರ್ನಮೆಂಟ್ ಹೊಸ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿಶೇಷವಾಗಿ ವಿಜಯಪುರದಿಂದ 10ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.ಈ ಯಶಸ್ವಿ ಆಯೋಜನೆಯ ಮೂಲಕ ಕರ್ನಾಟಕವು ದೊಡ್ಡ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್ಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಸಹಕಾರವನ್ನು ನೀರೀಕ್ಷಿಸುತ್ತೇವೆ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷರಾದ ಕುಮಾರ ಬಂಗಾರ್ಪ ಅವರು ತಿಳಿಸಿದರು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 