ತಾರಾಪೂರ ಗ್ರಾಮದಲ್ಲಿ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ
Sri Tarakeshwara Jatra Mahotsav in Tarapur village
ಆಲಮೇಲ 12: ತಾಲ್ಲೂಕಿನ ಭೀಮಾ ನದಿಯ ದಂಡೆಯಲ್ಲಿ ಇರುವ ಕಾಶಿಯ ಕಡಿಯ ಬಾಗಿಲೆಂದು ಹೆಸರುವಾಸಿಯಾಗಿರು ಸುಕ್ಷೇತ್ರ ತಾರಾಪೂರ ಗ್ರಾಮದಲ್ಲಿ ದಿನಾಂಕ 12/3/2026 ರವಿವಾರ ರಂದು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.ಬೆಳಿಗ್ಗೆ 7=00 ಗಂಟೆಗೆ ಶ್ರೀ ಷ ಬ್ರ ಗುರುಲಿಂಗ ಶಿವಾಚಾರ್ಯರು ಶ್ರೀ ಗುರು ಸಂಸ್ಥಾನ ಹಿರೇಮಠ ತಾರಾಪೂರ ಇವರಿಂದ ಶ್ರೀ ತಾರಕೇಶ್ವರ ದೇವರ ಲಿಂಗಕ್ಕೆ ರುದ್ರ ಅಭಿಷೇಕ ಬಿಲ್ವಾರ್ಚನೆ ನಡೆಯಿತು.ಬೆಳಿಗ್ಗೆ 8=00 ಗಂಟೆಗೆ ಶ್ರೀ ತಾರಕೇಶ್ವರ ದೇವರ ಪಲ್ಲಕ್ಕಿಯು ಗಂಗಸ್ಥಳ ಮಾಡಿಕೊಂಡು.
ಪುರವಂತರೊಂದಿಗೆ ಸುಮಂಗಲಿಯರಿಂದ ಕಳಸ ದೊಂದಿಗೆ ಸಕಲ ವಾದ್ಯ ವೈಭವದುಗಳೊಂದಿಗೆ ಮೇಲಿನ ಗುಡಿಯಿಂದ ಪಲ್ಲಕ್ಕಿ ಮೆರವಣಿಗೆಯನ್ನು ಪ್ರಮುಖ ಬೀದಿಗಳ ಮೂಲಕ ಶ್ರೀ ತಾರಕೇಶ್ವರ ದೇವರ ಗುಡಿಗೆ ತಲುಪಿತ್ತು.ನಂತರ ಮಧ್ಯಾಹ್ನ 12=00 ಗಂಟೆಗೆ ಶ್ರೀ ತಾರಕೇಶ್ವರ ದೇವರ ಪಲ್ಲಕ್ಕಿಯೊಂದಿಗೆ ಅಗ್ನಿ ಪ್ರವೇಶ ಮಾಡಲಾಯಿತು.ನಂತರ ಜಾತ್ರೆಗೆ ಬಂದಂತ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಊರಿನ ಹಿರಿಯರು ಮಹಿಳೆಯರು ಯುವಕರು ಹಾಗೂ ಶ್ರೀ ತಾರಕೇಶ್ವರ ದೇವಾಲಯ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 