ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ.

ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. Sri Krishna Janmashtami celebrations at the Taluk Administrative Complex


ಯರಗಟ್ಟಿ  04 : ತಾಲೂಕು ಆಡಳಿತ ಕಛೇರಿಯಲ್ಲಿ ತಹಶಿಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಾಣೆ ಮಾಡಿದ ಮಾತಾನಾಡಿದರು ಅವರು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಆಚರಣೆ ಜೋರು ಇದೆ. ಅದರಂತೆ ಶಾಲಾ, ಕಾಲೇಜು ಅದರಲ್ಲಿಯೂ ವಿಶೇಷವಾಗಿ ಪುಟಾಣಿ ಮಕ್ಕಳು ಶ್ರೀಕೃಷ್ಣ ವೇಷ ಧರಿಸಿ ಸಂಭ್ರಮಾಚರಣೆಗಳು ನಡೆಯುತ್ತೆವೆ.ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧೆಭಕ್ತಿಯಿಂದ ಆಚರಿಸೋಣ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಜಗದೋದ್ಧಾರಕನನ್ನು ಪೂಜಿಸಿ ಪಾವನರಾಗೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿರಸ್ತೆದಾರ ಎಸ್‌. ಬಿ. ಕುಲಕರ್ಣಿ, ಉಪ ತಹಶೀಲ್ದಾರ ಎಸ್‌. ಎಸ್‌. ಜಾದವ, ಕಂದಾಯ ನೀರಿಕ್ಷಕ ವಾಯ್‌. ಎಫ್‌. ಮುರ್ತೇನ್ನವರ, ಗ್ರಾಮ ಲೆಕ್ಕಾಧಿಕಾರಿ ಎಲ್‌. ಸಿ. ದಳವಾಯಿ, ಪರಂಡೆಪ್ಪ ಹೊಟ್ಟೆನ್ನವರ, ವಾಯ್‌. ಎಚ್‌. ಭಜಂತ್ರಿ, ಮಾಜಿ ಗ್ರಾ. ಪಂ. ಉಪಾಧ್ಯಕ್ಷ ಸದಾನಂದ ಹಣಬರ, ರಮೇಶ ಕರಿಗೌಡರ, ವಿಜಯ ಉಪ್ಪಿನ, ಸ್ವರೂಪ ಚಪಳಿ, ಲಖನ ಪೂಜಾರಿ, ಕೆ. ಎಂ. ಗಡಕರಿ, ಎಲ್‌. ಸಿ ತಳವಾರ, ಶಾಹಿನ ಮಿಶ್ರಿಕೋಟಿ,  ಎಸ್‌. ಬಿ. ಮರಿಹಳ, ಭಾರತಿ ಬಿರದರಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.