ಸವದತ್ತಿ ತೋಟದ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
Sri Krishna Janmashtami celebration at Savadatti Thota Primary School
ಲೋಕದರ್ಶನ ವರದಿ
ಬೆಟಗೇರಿ 04 : ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದ ಸವದತ್ತಿ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ನಾಷ್ಟಮಿಯನ್ನು ಶುಕ್ರವಾರ ಸೆ.4 ರಂದು ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿಯ ಶಾಲೆಯ ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ಕೊಳಲು ಹಿಡಿದು ತಲೆಯ ಮೇಲೆ ಕೀರೀಟ, ನವಿಲು ಗರಿ, ಹಣೆ ಮೇಲೆ ತಿಲಕ ಕೊರಳಲ್ಲಿ ಮುತ್ತಿನ ಹಾರ ಸೊಂಟಕ್ಕೆ ಚಿಕ್ಕ ಧೋತಿ...ಹೀಗೆ ವಿವಿಧ ಅಂಲಕಾರಿಕ ವಸ್ತುಗಳಿಂದ ಸಿಂಗಾರಗೊಂಡ ಮಕ್ಕಳು ಪಾಲ್ಗೊಂಡು ಕೃಷ್ಣ ಜನ್ನಾಷ್ಟಮಿ ಆಚರಣೆ ಕಾರ್ಯಕ್ರಮಕ್ಕೆ ಮೆರಗು ತಂದರು.
ಈ ವೇಳೆ ಶಾಲೆಯ ಮುಖ್ಯಶಿಕ್ಷಕ ಡಿ.ಎಸ್.ಮಡಿವಾಳರ, ಎಸ್.ಬಿ.ಭಜಂತ್ರಿ, ಎಸ್.ಎಚ್.ನಾಯಕ, ಅಶ್ವಿನಿ ಚಿಗದಿನ್ನಿ, ಲಕ್ಷ್ಮೀ ಸವತಿಕಾಯಿ, ಕಾವೇರಿ ವಡೇರ, ಶಾಲೆಯ ಮಕ್ಕಳು, ಶಿಕ್ಷಕರು, ಅತಿಥಿ ಶಿಕ್ಷಕರು, ಮತ್ತೀತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 