ಮೇ 19 ರಿಂದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಪ್ರಾರಂಭ
Sri Durga Devi Jatra festival begins from May 19th
ನೇಸರಗಿ, 11 : ಇಲ್ಲಿನ ಪ್ರತಿಷ್ಠಿತ ಶ್ರೀ ದುರ್ಗಾದೇವಿ ತಾಯಿಯ 8 ನೇ ಜಾತ್ರಾ ಮಹೋತ್ಸವವು ಸೋಮವಾರ ದಿ. 19-05-2025 ರಿಂದ ಶುಕ್ರವಾರ ದಿ. 23-05-2025 ರವರೆಗೆ ಅದ್ದೂರಿಯಾಗಿ ಜರುಗಲಿದೆ.
ಮೇ 19 ರಂದು ಮುಂಜಾನೆ 10 ಘಂಟೆಗೆ ವಾದ್ಯ ಮೇಳದೊಂದಿಗೆ ಕುಂಭಮೇಳದೊಂದಿಗೆ ಗ್ರಾಮದ ದೇವಸ್ಥಾನಗಳಲ್ಲಿ ಉಡಿ ತುಂಬುವದು, ಮಹಾಪ್ರಸಾದ ನಂತರ ರಾತ್ರಿ 9 ಘಂಟೆಗೆ ಸಿದ್ದಾಪುರದ ಶ್ರೀ ಗುರು ಪ್ರಸಾದ ಜಾನಪದ ಕಲಾ ತಂಡದಿಂದ ಚೌಡಕಿ ಪದ ಹಾಡುವ ಕಾರ್ಯಕ್ರಮ ಜರುಗಲಿದೆ. ಮೇ 20ರಂದು ಮುಂಜಾನೆ 9 ಘಂಟೆಗೆ ಬಸ್ ನಿಲ್ದಾಣದ ಬನ್ನಿಗಿಡದ ಸನ್ನಿದಿಯಲ್ಲಿ ಪೂಜೆ ಸಲ್ಲಿಸಿ ದೇವಿಯ ಹೊನ್ನಾಟ ಪ್ರಾರಂಭ ಸಂಜೆಯವರೆಗೆ ಹೊನ್ನಾಟ ನೆರವೇರಲಿದೆ. ರಾತ್ರಿ 9 ಘಂಟೆಗೆ ಅನೇಕ ಗ್ರಾಮಗಳ ಭಜನಾ ಕಾರ್ಯಕ್ರಮ ನಡೆಯಲಿದೆ. ಮೇ 21ರಂದು ಮದ್ಯಾಹ್ನ 12-15 ಘಂಟೆಗೆ ಸಾಮೂಹಿಕ ವಿವಾಹ, ಮಹಾಪ್ರಸಾದ ಜರುಗಲಿದೆ.
ರಾತ್ರಿ 9-30 ಕ್ಕೆ ದುರ್ಗಾದೇವಿ ದೇವಸ್ಥಾನದಲ್ಲಿ ಸಿಂಗಳಾಪುರ ಕಲಾವಿದರಿಂದ ಜಾನಪದ ಕಾರ್ಯಕ್ರಮ ಜರುಗಲಿದೆ. ಮೇ 22 ರಂದು ರಾತ್ರಿ 8-00 ಘಂಟೆಗೆ ಶಿವು ಮೆಲೋಡಿಯಸ್ ತಂಡದಿಂದ ವಿದ್ಯಾ ಮಂದಿರ ಹೈಸ್ಕೂಲ್ ಮೈದಾನದಲ್ಲಿ ರಸಮಂಜರಿ, ನಗೆಹಬ್ಬ, ನೃತ್ಯ ಕಾರ್ಯಕ್ರಮ ನಡೆಯುತ್ತವೆ. ಮೇ. 23 ರಂದು ಶ್ರೀ ದುರ್ಗಾದೇವಿ ಉಡಿ ಒಡೆಯುವದು, ರಾತ್ರಿ ಮಕ್ಕಳಿಂದ ಮನೋರಂಜನ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ದುರ್ಗಾದೇವಿ ಜಾತ್ರಾ ಕಮಿಟಿಯ ಸದಸ್ಯರು ತಿಳಿಸಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 