ಸಮೀರವಾಡಿ-ಸೈದಾಪುರದಲ್ಲಿ ಶ್ರೀ ಬಸವಣ್ಣನ ಜಾತ್ರೆ

ಸಮೀರವಾಡಿ-ಸೈದಾಪುರದಲ್ಲಿ ಶ್ರೀ ಬಸವಣ್ಣನ ಜಾತ್ರೆ  Sri Basavanna Jatra at Sameerawadi-Saidapur


ರಬಕವಿ-ಬನಹಟ್ಟಿ 16 : ಸಮೀರವಾಡಿ-ಸೈದಾಪುರ ಗ್ರಾಮದ  ಬಸವಣ್ಣನ ಜಾತ್ರೆ ಆ.17ರಂದು ಶ್ರಾವಣ ಮಾಸದ ಸೋಮವಾರ ಸಕಲ ಮಂಗಲ ಕಾರ್ಯಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಅಭಿಷೇಕ ಹಾಗೂ ಮಹಾಪೂಜೆ ನೆರವೇರಲಿದ್ದು, ಮಧ್ಯಾಹ್ನ 11.30ಕ್ಕೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯಲ್ಲಿ ಗ್ರಾಮದ ಗುರುಹಿರಿಯರು, ರೈತರು, ವ್ಯಾಪಾರಸ್ಥರು, ಗೋದಾವರಿ ಸಕ್ಕರೆ ಕಾರ್ಖಾನೆ, ಕೋ-ಜನ ಹಾಗೂ ಎಸ್‌ಒಸಿ ಅಧಿಕಾರಿಗಳು ಮತ್ತು ಕಾರ್ಮಿಕರು, ಮಹಿಳೆಯರು, ಶಾಲಾ ಮಕ್ಕಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ   ಬಸವಣ್ಣನ ಕೃಪೆಗೆ ಪಾತ್ರರಾಗುವಂತೆ   ಬಸವಣ್ಣ ಸೇವಾ ಸಮಿತಿ ಮನವಿ ಮಾಡಿದೆ.